ಉಪ್ಪಿನಂಗಡಿ: ಸಂಬಂಧಿಕರ ಮನೆಯಲ್ಲಿ ಮಗುವಿಗೆ ಕಿವಿ ಚುಚ್ಚುವ ಕಾರ್ಯಕ್ರಮಕ್ಕೆ ನೆಂಟರಾಗಿ ಬಂದವರು ವಾಹನ ಪಾರ್ಕಿಂಗ್ ಸಮಯದಲ್ಲಿ ವಾಹನಗಳು ಪರಸ್ಪರ ತಾಗಿತೆಂದು ಆಕ್ರೋಶಗೊಂಡು ಹೊಡೆದಾಟ ನಡೆಸಿ ಪೊಲೀಸರಿಗೆ ದೂರು ಸಲ್ಲಿಸಿದ ಘಟನೆ ಇಲ್ಲಿಗೆ ಸಮೀಪದ ನೆಲ್ಯಾಡಿ ಗ್ರಾಮದ ಕೋಣಾಲು ಎಂಬಲ್ಲಿ ಸಂಭವಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಗುರುವಾಯನಕೆರೆ ಅರಮಲೆ ಬೆಟ್ಟ ನಿವಾಸಿ ನಝೂಮುನ್ನೀಶಾ ಎಂಬಾಕೆ ದೂರು ನೀಡಿದ್ದು, ತನ್ನ ಹಾಗೂ ಸಂಬಂಧಿಕರ ಮೇಲೆ ನಿಜಾಮ್, ಝುಬೇರ್, ಅಪ್ಸಾ, ನಾಸಿಪ್ ಎಂಬ ನಾಲ್ವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.