ಸುಳ್ಯ: ದೇವರ ಹೆಸರಿನಲ್ಲಿ ತಪ್ಪು ಮಾಡುವವರನ್ನು ದೇವರೆಂದೂ ಕ್ಷಮಿಸಲಾರರು ಎಂದು ಕೇರಳದ ಕುರುವಾರಕುಂಡ್ ಸಮನ್ವಯಗಿರಿ ಅಧೀನ ಮಠದ ಶ್ರೀಮದ್ ಸ್ವಾಮಿ ಆತ್ಮದಾಸ್ ಯಾಮಿ ಹೇಳಿದರು.
ಸುಳ್ಯ ತಾಲೂಕು ಮಿಲಾದ್ ಸಮಿತಿ ವತಿಯಿಂದ ಸೆ.20ರಂದು ಗಾಂಧಿನಗರದಲ್ಲಿ ನಡೆದ ಮಿಲಾದ್ ಸಾರ್ವಜನಿಕ ಸಭೆಯಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮದ ಕುರಿತು ಮಾತನಾಡಿದರು. ಪ್ರವಾದಿ ಮಹಮ್ಮದರು ಓರ್ವ ಮೇರು ವ್ಯಕ್ತಿತ್ವದ ವ್ಯಕ್ತಿಯಾಗಿದ್ದು, ಅವರ ಅನುಯಾಯಿಗಳಾದವರು ಕರುಣೆ ಮತ್ತು ಪ್ರೀತಿಯಿಂದಲೇ ಬದುಕಬೇಕು ಎಂದರು.
ಮಿಲಾದ್ ಸಮಿತಿ ಅಧ್ಯಕ್ಷ ಶರೀಫ್ ಕಂಠಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಉಮ್ಮರ್ ಕೆ.ಎಸ್.ಪ್ರಾಸ್ತಾವಿಕ ಮಾತನಾಡಿದರು.
ಸಯ್ಯದ್ ಕುಂಞಕೋಯ ತಂಙಳ್ ಸಅದಿ ಪ್ರಾರ್ಥನೆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಸ್ಲಿಮ್ ಧಾರ್ಮಿಕ ವಾಗ್ಮಿಗಳಾದ ಎಂ.ಎಸ್.ಎಂ. ಅಬ್ದುಲ್ ರಶೀದ್ ಝನಿ ಖಾಮಿಲ್ ಸಖಾಫಿ, ಮೌಲಾನಾ ಅಝೀಝ್ ಧಾರಿಮಿ ಚೊಕ್ಕಬೆಟ್ಟು ಹಾಗೂ ಸುಹೈಲ್ ಧಾರಿಮಿ ನಾಪೋಕ್ಲು, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪ್ರಮುಖರಾದ ಸಯ್ಯದ್ ಹುಸೈನ್ ತಂಙಳ್ ಆದೂರು, ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಮಹಮ್ಮದ್ ಇಟ್ಬಾಲ್ ಎಲಿಮಲೆ, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಹಾಜಿ ಮುಸ್ತಫಾ ಜನತಾ, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಹಾಜಿ ಮಹಮ್ಮದ್ ಕೆ.ಎಂ.ಎಸ್., ಹಾಜಿ ಅಬ್ದುಲ್ ಮಜೀದ್ ಜನತಾ, ವಕೀಲ ಪವಾಝ್ ಕನಕಮಜಲು, ಎ.ಬಿ.ಅಶ್ರಫ್ ಸಅದಿ, ಹಾಜಿ ಇಬ್ರಾಹಿಂ ಕತಾರ್ ಮಂಡೆಕೋಲು, ಆದಂ ಹಾಜಿ ಕಮ್ಮಾಡಿ, ಇಸ್ಮಾಯಿಲ್ ಪಡ್ಪಿನಂಗಡಿ, ಮಹಮ್ಮದ್ ಕುಂಞ ಗೂನಡ್ಕ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಬೂಬಕ್ಕರ್ ಪೂಪಿ, ಇಬ್ರಾಹಿಂ ಪಿ.ಪೈಚಾರ್, ಲತೀಫ್ ಹರ್ಲಡ್ಕ, ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಎಸ್.ಸಂಶುದ್ದೀನ್ ಅರಂಬೂರು, ಹಮೀದ್ ಬೀಜಕೊಚ್ಚಿ, ಹಾಜಿ ಅಬ್ದುಲ್ ರಝಾಕ್ ರಾಜಧಾನಿ ಉಪಸ್ಥಿತರಿದ್ದರು.
ಮಿಲಾದ್ ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಮೊದಲು ಮೊಗರ್ಪಣೆ ಮಸೀದಿ ವಠಾರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ದಫ್ ಪ್ರದರ್ಶನ ಕಣ್ಮನ ಸೆಳೆಯಿತು.