ಹನುಮಸಾಗರ ಸಮೀಪದ ಕಬ್ಬರಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಉದ್ಘಾಟಿಸಿದರು. ವಕೀಲ ಬಿ.ವೈ. ಭಜಂತ್ರಿ, ಮುಖ್ಯ ಶಿಕ್ಷಕ ಮೈಲಾರಪ್ಪ ಹಾದಿಮನಿ, ಎಸ್ಡಿಎಂಸಿ ಅಧ್ಯಕ್ಷ ಯಮುನಪ್ಪ ಗುರಿಕಾರ, ಎಎಸ್‌ಐ ಶಂಕ್ರಪ್ಪ ಮೇಟಿ, ಸಿಆರ್‌ಪಿ ಮಂಜುನಾಥ ಪೂಜಾರಿ ಇತರರಿದ್ದರು. 
ಜಿಲ್ಲೆ

ಎಲ್ಲರೂ ಕಾನೂನಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ

ಹನುಮಸಾಗರ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.


ಸಮೀಪದ ಕಬ್ಬರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಯುವಕರು ದುಶ್ಚಟಗಳಿಗೆ ಬಳಿಯಾಗದೆ ಉದ್ಯೋಗದ ಕಡೆಗೆ ಗಮನಹರಿಸಬೇಕು. ಕಾನೂನನ್ನು ಅರ್ಥೈಸಿಕೊಂಡು ಕುಟುಂಬದ ಸದಸ್ಯರು ಹಾಗೂ ನೆರೆ ಹೊರೆಯವರಿಗೆ ತಿಳಿಸಬೇಕು. ಮಕ್ಕಳ ಹಕ್ಕುಗಳನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅವರನ್ನು ರಕ್ಷಿಸಲು ಕಾನೂನಿನ ಸಹಾಯ ಯಾವಾಗಲೂ ಇರುತ್ತದೆ ಎಂದರು.


ವಕೀಲ ಬಿ. ವೈ. ಭಜಂತ್ರಿ, ಮುಖ್ಯ ಶಿಕ್ಷಕ ಮೈಲಾರಪ್ಪ ಹಾದಿಮನಿ, ಎಸ್ಡಿಎಂಸಿ ಅಧ್ಯಕ್ಷ ಯಮುನಪ್ಪ ಗುರಿಕಾರ, ಎಎಸ್‌ಐ ಶಂಕ್ರಪ್ಪ ಮೇಟಿ, ಸಿಆರ್‌ಪಿ ಮಂಜುನಾಥ ಪೂಜಾರಿ, ಶಿಕ್ಷಕರಾದ ಚಿದಾನಂದ ಕಸ್ತೂರಿ, ಶಿವಪ್ರಕಾಶ್ ಸಜ್ಜನ್ ಇತರರಿದ್ದರು.