ಸಿಂಧನೂರು ತಹಸಿಲ್ ಕಚೇರಿ ಮುಂಭಾಗ ಕೃಷಿ ಪ್ರಾಂತ ಕೂಲಿಕಾರರ ಸಂಘ ಬುಧವಾರ ಪ್ರತಿಭಟನೆ ನಡೆಸಿತು. ಸಂಘಟನೆ ತಾಲೂಕು ಅಧ್ಯಕ್ಷ ಎಚ್.ವಿರೂಪಾಕ್ಷಗೌಡ, ಪ್ರಮುಖರಾದ ಬಸವಂತರಾಯಗೌಡ ಕಲ್ಲೂರು, ಅಪ್ಪಣ್ಣ ಕಾಂಬಳೆ, ಕರಿಯಣ್ಣ ಭೋವಿ ಕಲ್ಲೂರು ಇದ್ದರು. 
ಜಿಲ್ಲೆ

ಎಡದಂಡೆ ಕಾಲುವೆಗೆ ನೀರು ಹರಿಸಲು ಆಗ್ರಹ

Gangavati - Desk - Veeresh S Ullagaddi

ಸಿಂಧನೂರು: ತಾಲೂಕಿನ ತುಂಗಭದ್ರಾ ಎಡದಂಡೆ ಕಾಲುವೆ 54ರ ವ್ಯಾಪ್ತಿಯ ವಿತರಣಾ ಕಾಲುವೆ ನಂ.3/ಆರ್‌ಕ್ಕೆ ಸಮರ್ಪಕ ನೀರು ಹರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ನಗರದ ತಹಸಿಲ್ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿತು.


ನಗರದ ಎಡದಂಡೆ ನಾಲೆ 54ರ ವ್ಯಾಪ್ತಿಯಲ್ಲಿ ಬರುವ ನಂ.3/ಆರ್ ವ್ಯಾಪ್ತಿ ಆರು ಸಾವಿರ ಎಕರೆ ನೀರಾವರಿ ಜಮೀನಿದ್ದು, 1000 ಎಕರೆಗೆ ನೀರು ದೊರೆಯುತ್ತಿಲ್ಲ. ಕಳೆದ ಒಂದು ದಶಕದಿಂದ ಇದೇ ಸ್ಥಿತಿ ಇದೆ.

ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀರು ಹರಿಸುವಂತೆ ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜವಾಗಿಲ್ಲ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಪ್‌ಸೆಟ್ ರೈತರಿಗೆ 10 ಗಂಟೆ ವಿದ್ಯುತ್ ಪೂರೈಕೆಗೆ ಆಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಸಂಘಟನೆ ತಾಲೂಕು ಅಧ್ಯಕ್ಷ ಎಚ್.ವಿರೂಪಾಕ್ಷಗೌಡ, ಪ್ರಮುಖರಾದ ಬಸವಂತರಾಯಗೌಡ ಕಲ್ಲೂರು, ಅಪ್ಪಣ್ಣ ಕಾಂಬಳೆ, ಕರಿಯಣ್ಣ ಭೋವಿ ಕಲ್ಲೂರು, ತಿಪ್ಪಣ್ಣ ಉಪ್ಪಾರ ಮುಳ್ಳೂರು, ಕಾರಿಗನೂರು ವೆಂಕನಗೌಡ ಮುಳ್ಳೂರು, ಮಲ್ಲಿಕಾರ್ಜುನ ಮುಳ್ಳೂರು, ಶಿವಣ್ಣ ಕಲ್ಲೂರು, ವೆಂಕೋಬ ಕಲ್ಲೂರು, ಹನುಮಂತ ಮುಳ್ಳೂರು ಇದ್ದರು.