ಜಿಲ್ಲೆ

ಆರೋಗ್ಯ, ಪರಿಸರ ಕುರಿತು ಗ್ರೀನ್​ ರನ್​

ಬೆಂಗಳೂರು:ಆರೋಗ್ಯ, ಪರಿಸರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರೈಸ್ಟ್​ ಅಕಾಡೆಮಿ ಇನ್ಸಿಸ್ಟಿಟ್ಯೂಟ್​ ಫಾರ್​ ಅಡ್ವಾನ್ಸ್​ ಸ್ಡಡಿಸ್​(ಸಿಎಐಎಎಸ್​) ಆಯೋಜಿಸಿದ್ದ "ಗ್ರೀನ್​ ರನ್​' ವಾಕಥಾನ್​ನಲ್ಲಿ ಮಳೆ ನಡುವೆಯೂ ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಸಿಎಐಎಎಸ್​ ಕ್ಯಾಂಪಸ್​ನಿಂದ ಆರಂಭವಾದ ವಾಕಥಾನ್​ ವಿವಿಧ ವೃತ್ತಗಳ ಮೂಲಕ 7 ಕಿ.ಮೀ.ವರೆಗೆ ಸಾಗಿ ಎಲೆಕ್ಟ್ರಾನಿಕ್ಸ್​ ಸಿಟಿ ಮೊದಲ ಹಂತದ ವೇಲಂಕಣಿ ಟೆಕ್​ಪಾರ್ಕ್​ನಲ್ಲಿ ಸಮಾಪ್ತಿಗೊಂಡಿತು. ವಾಕ್​ಥಾನ್​ನಲ್ಲಿ ಉತ್ತಮ ಆರೋಗ್ಯ ಮೂಲಕ ಬದುಕು ನಡೆಸಬೇಕು ಎಂಬುದರ ಬಗ್ಗೆ ಬೆಳಕು ಚೆಲ್ಲಲಾಯಿತು.

ಕ್ರೈಸ್ಟ್  ಅಕಾಡೆಮಿ ಗ್ರೂಪ್​ ಇನ್ಸಿಸ್ಟಿಟ್ಯೂಟ್​ ನಿರ್ದೇಶಕ ಫಾದರ್​​​ ಸೆಬಿ ಪಾಲಮಟ್ಟತ್​, ನಾರಾಯಣ ಹೆಲ್ತ್​ನ ಡಾ.ಬಿ.ಎನ್​.ಪ್ರಶಾಂತ್​, ವ್ಯಾಕಥಾನ್​ ಕುರಿತು ಮಾಹಿತಿ ನೀಡಿದರು. ಆರು ವಿಭಾಗಗಳಲ್ಲಿ ವಿಜೇತರಾದವರಿಗೆ ಹನನ್​ ದೆಲ್ವಿ, ನಾರಾಯಣ ಹೆಲ್ತ್​ನ ಡಾ.ಪಿ.ಪ್ರವಿಣ್​ ಬಹುಮಾನ ವಿತರಿಸಿದರು. 140 ವಿದ್ಯಾರ್ಥಿಗಳು ಸ್ವಯಂಸೇವಕ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮಕ್ಕೆ ಯಶಸ್ವಿಗೆ ಕಾರಣೀಭೂತರಾದರು. ಸಿಎಐಎಎಸ್​ ಪ್ರಾಂಶುಪಾಲ ಫಾದರ್​ ಅಂಟೋನಿ ಡೇವಿಸ್​, ಎಸ್​ಸಿಇಎಡಿ ಫೌಂಡೇಷನ್​ ಸಂಸ್ಥಾಪಕ ಸಿಜು ಡೇನಿಯಲ್​, ಅರಣ್ಯ ಇಲಾಖೆ ಅಧಿಕಾರಿ ಸಂತೋಷ್​ ಮತ್ತಿತರರಿದ್ದರು.