ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅವ್ಯವಹಾರ ತನಿಖೆ ನಡೆಸುವಂತೆ ಆಗ್ರಹಿಸಿ ರೈತರು ಉಪ ತಹಸೀಲ್ದಾರ್ ವಿವೇಕ್‌ಗೆ ಗುರುವಾರ ಮನವಿ ಸಲ್ಲಿಸಿದರು. ನಿರ್ದೇಶಕ ಬಸನಗೌಡ ಸಿದ್ನಿಕಲ್, ಚೆನ್ನಮ್ಮ ಈರಗಂಡಿ, ಶಿವಪ್ಪ ಪಲಕನಮರಡಿ, ಸಾಬಣ್ಣ ಕಮ್ಮಲದಿನ್ನಿ, ಬಸಯ್ಯ ಸ್ವಾಮಿ, ಬಸವರಾಜ ಯಾದವ್, ಬಸವರಾಜ್ ಮಂಡಲಗುಡ್ಡ ಇತರರಿದ್ದರು. 
ಜಿಲ್ಲೆ

ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ: ಉಪ ತಹಸೀಲ್ದಾರ್ ವಿವೇಕ್‌ಗೆ ಮನವಿ

ದೇವದುರ್ಗ: ಜಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ವೀರಭದ್ರಪ್ಪ ಚಿಂಚರಕಿ ಅವಧಿಯ ಅವ್ಯವಹಾರ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರೈತರು ಉಪ ತಹಸೀಲ್ದಾರ್ ವಿವೇಕ್‌ಗೆ ಗುರುವಾರ ಮನವಿ ಸಲ್ಲಿಸಿದರು.


ಸಂಘದ ನಿವೃತ್ತ ಕಾರ್ಯದರ್ಶಿ ವೀರಭದ್ರಪ್ಪ ಚಿಂಚರಕಿ 2022ರ ಮೇ.31ಕ್ಕೆ 60 ವರ್ಷವಾದರೂ, ಆಡಳಿತ ಮಂಡಳಿ ಗಮನಕ್ಕೆ ತರದೆ 2023 ಮೇ 31ರವರೆಗೆ ಹೆಚ್ಚುವರಿ ಒಂದು ವಷರ್ ಕಾರ್ಯನಿರ್ವಹಿಸಿದ್ದಾರೆ. ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಒಂದು ವರ್ಷದ ನಂತರ ನಿವೃತ್ತಿಯಾಗಿದ್ದಾರೆ.

ನಿವೃತ್ತಿಯಾದ ಎರಡು ದಿನ ನಂತರ ಸಹಕಾರಿ ಸಂಘದ ಖಾತೆಯಿಂದ 13,74,636 ರೂ. ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾಯಿಸಿಕೊಂಡಿರುವುದು ಅಪರಾಧವಾಗಿದ್ದು, ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.


ಸಂಬಂಧಿಸಿದ ಅಧಿಕಾರಿಗಳು ನಿವೃತ್ತ ಕಾರ್ಯದರ್ಶಿ ವೀರಭದ್ರಪ್ಪ ಚಿಂಚರಕಿ ವಿರುದ್ಧ ವಂಚನೆ ಕೇಸ್ ದಾಖಲಿಸಬೇಕು. ಅವರ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅನುಭವ ಹೊಂದಿರುವ ಅಧಿಕಾರಿ ಅಥವಾ ಸಂಘದಲ್ಲಿ ಕಾರ್ಯನಿರ್ವಹಿಸುವ ಹಿರಿಯ ಸಿಬ್ಬಂದಿಗೆ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.


ಸಂಘದ ಅಧ್ಯಕ್ಷ ಕೆರಲಿಂಗಪ್ಪ ನಾಡಗೌಡ, ನಿರ್ದೇಶಕ ಬಸನಗೌಡ ಸಿದ್ನಿಕಲ್, ಚೆನ್ನಮ್ಮ ಈರಗಂಡಿ, ಮುಖಂಡರಾದ ಶಿವಪ್ಪ ಪಲಕನಮರಡಿ, ಸಾಬಣ್ಣ ಕಮ್ಮಲದಿನ್ನಿ, ಬಸಯ್ಯ ಸ್ವಾಮಿ, ಬಸವರಾಜ ಯಾದವ್, ಬಸವರಾಜ್ ಮಂಡಲಗುಡ್ಡ, ಚಂದ್ರು ಬೊಮ್ಮನಹಳ್ಳಿ, ವೆಂಕೋಬ ಯರಗುಡ್ಡ, ಅಮರೇಶ್ ಭವಾನಿ, ರಾಜಪ್ಪ ಬಾಗೂರ, ವೆಂಕೋಬ ಕಾವಲಿ ಬಂಕಲದೊಡ್ಡಿ, ಭೀಮನಗೌಡ ಲಿಂಗದಳ್ಳಿ, ಶಿವರಾಜ್ ದೇಸಾಯಿ ಇತರರಿದ್ದರು.