ಹಿರೇಹೆಗ್ಡಾಳು ಸಹಕಾರ ಸಂಘಕ್ಕೆ ಕೊಟ್ರೇಶಪ್ಪ ಅಧ್ಯಕ್ಷ

sanga
ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಎಸ್.ಎಸ್.ಕೊಟ್ರೇಶಪ್ಪ, ಉಪಾಧ್ಯಕ್ಷರಾಗಿ ದೊಡ್ಡ ಹನುಮಂತಪ್ಪ ಅವಿರೋಧವಾಗಿ ಬುಧವಾರ ಆಯ್ಕೆಯಾದರು. ಸಂಘದ ಮಾಜಿ ಅಧ್ಯಕ್ಷರಾದ ನಂದಿ ವಿರುಪಾಕ್ಷ ,ಜಿ .ಆರ್. ಚನ್ನಬಸಪ್ಪ, ಮಾಜಿ ಉಪಾಧ್ಯಕ್ಷ ಅದಿಮನಿ ಬಸವರಾಜ, ನಿರ್ದೇಶಕರಗಳಾದ ಗೌಡ್ರು ನಾಗಮ್ಮ, ಬಿ.ಬಸವರಾಜ, ನಂದಿ ಜಂಬಣ್ಣ ಇದ್ದರು.
Published on

ಕೂಡ್ಲಿಗಿ: ತಾಲೂಕಿನ ಹಿರೇಹೆಗ್ಡಾಳು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಎಸ್. ಎಸ್. ಕೊಟ್ರೇಶಪ್ಪ, ಉಪಾಧ್ಯಕ್ಷರಾಗಿ ದೊಡ್ಡ ಹನುಮಂತಪ್ಪ ಅವಿರೋಧವಾಗಿ ಬುಧವಾರ ಆಯ್ಕೆಯಾದರು.


ಅಧ್ಯಕ್ಷ ಎಸ್.ಎಸ್.ಕೊಟ್ರೇಶಪ್ಪ ಮಾತಾನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ. ರೈತರಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿಯ ಸಾಲಗಳನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

ಸಹಕಾರ ಸಂಘದ ಮೂಲಕ ರಸಗೊಬ್ಬರ ಹಾಗೂ ಬಿತ್ತನೆ ಬೀಜ ನೀಡಲು ಸದಸ್ಯರೊಂದಿಗೆ ಚರ್ಚಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.


ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿ.ಬಸವರಾಜ, ಚುನಾವಣಾಧಿಕಾರಿ ಡಿ. ವೀರೇಶ ಕುಮಾರ್, ಕ್ಷೇತ್ರಾಧಿಕಾರಿ ಕೆ. ಕನಕಪ್ಪ, ಸಹಕಾರ ಸಂಘದ ಕಾರ್ಯದರ್ಶಿ ಬಿ.ಕೊಟ್ರೇಶ್, ಸಂಘದ ಸಿಂಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net