ಜಿಲ್ಲೆ

ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಮಿತಿ ಸಭೆ : ರಥಯಾತ್ರೆ ಸ್ವಾಗತಿಸಲು ನಿರ್ಣಯ

ಸೌಮ್ಯ ಆರ್

ಸುಳ್ಯ: ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಭೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ನಡೆಯಿತು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶ್ರೀನಾಥ ಎಂ.ಪಿ. ಅಧ್ಯಕ್ಷತೆ ವಹಿಸಿದ್ದರು.

ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ ಮಂಡ್ಯದಲ್ಲಿ ನಡೆಯುವ ರಾಜ್ಯ ಸಾಹಿತ್ಯ ಸಮ್ಮೇಳನದ ಬಗ್ಗೆ ದ.ಕ. ಜಿಲ್ಲೆಗೆ ಆಗಮಿಸುವ ರಥಯಾತ್ರೆಗಳನ್ನು ಎಲ್ಲ ತಾಲೂಕುಗಳಲ್ಲಿ ಸ್ವಾಗತಿಸುವ ಬಗ್ಗೆ ಚರ್ಚೆ ನಡೆಯಿತು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಕಾರ್ಯಕ್ರಮದ ಬಗ್ಗೆ ವಿವರ ನೀಡಿ ರಥ ಆಗಮನದ ವೇಳೆ ಸಹಕರಿಸಲು ಮನವಿ ಮಾಡಿದರು.

ತಾಲೂಕು ಸಾಹಿತ್ಯ ಸಮ್ಮೇಳನ, ದತ್ತಿ ನಿಧಿ ಕಾರ್ಯಕ್ರಮಗಳು ಹಾಗೂ ಕನ್ನಡ ರಾಜ್ಯೋತ್ಸವ ನಡೆಸುವ ಬಗ್ಗೆ ಚರ್ಚೆ ನಡೆಯಿತು.
ಕೇಂದ್ರ ಸಾಹಿತ್ಯ ಪರಿಷತ್ ಸದಸ್ಯ ಡಾ.ಮಾಧವ ಎಂ.ಕೆ, ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ್ ರೇವಣ್ಕರ್, ಬೆಳ್ತಂಗಡಿ ಅಧ್ಯಕ್ಷ ಯದುಪತಿ ಗೌಡ, ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್, ಕಡಬ ತಾಲೂಕು ಅಧ್ಯಕ್ಷ ಶೇಷಪ್ಪ ರೈ, ಜಿಲ್ಲಾ ಕೋಶಾಧಿಕಾರಿ ಐತಪ್ಪ ನಾಯ್ಕ, ಸದಸ್ಯರಾದ ಸನತ್ ಕುಮಾರ್ ಹೆಗ್ಡೆ, ತೇಜಸ್ವಿ ಅಂಬೆಕಲ್ಲು, ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಳ್ಳತಡ್ಕ, ದುರ್ಗಾಪ್ರಸಾದ್ ರೈ ಕುಂಬ್ರ, ಖಾಲಿದ್ ಉಜಿರೆ, ಹರೀಶ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ರಾಜೇಶ್ವರಿ ವರದಿ ಮಂಡಿಸಿದರು. ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ವಂದಿಸಿದರು.