ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಉಡುಪಿ ಜಿಲ್ಲೆ ಶಿಶುಮರಣ ಇಲ್ಲದಿರುವುದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಯಂಟ್ ಗ್ರೂಪ್, ಜನೌಷಧ ಕೇಂದ್ರ, ಓಂಕಾರ ಸಂಜೀವಿನಿ ಒಕ್ಕೂಟ ವಾರಂಬಳ್ಳಿ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಶುಕ್ರವಾರ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಲ್ವರು ಸಾಧಕಿಯರನ್ನು ಸನ್ಮಾನಿಸಲಾಯಿತು. ಅನಾರೋಗ್ಯಕ್ಕೊಳಗಾದ ಮಹಿಳೆಗೆ ಆರ್ಥಿಕ ನೆರವು ನೀಡಲಾಯಿತು. ಬಳಿಕ ಮಹಿಳೆಯರ ಆರೋಗ್ಯ ಉಚಿತ ತಪಾಸಣೆ ಜರುಗಿತು. ಜಿಲ್ಲಾ ವೈದ್ಯಾಧಿಕಾರಿ ಡಾ.ನಾಗಭೂಷಣ, ಜಯಂಟ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯದಾಸ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಡಾ.ಮಹೇಶ್ ಐತಾಳ್, ಡಾ.ಗಣೇಶ್ ಕಾಮತ್, ಡಾ.ದೀಪಾ, ನಿತ್ಯಾನಂದ ಬಿ.ಆರ್, ಹೇಮಾ ಪೂಜಾರಿ, ಸುಂದರ್ ಪೂಜಾರಿ, ಮಧುಸೂಧನ ಹೇರೂರು, ಮಿಲ್ಟನ್ ಒಲಿವೇರಾ, ಆದರ್ಶ ಶೆಟ್ಟಿ ಉಪಸ್ಥಿತರಿದ್ದರು.