ಬೆಂಗಳೂರು: ಬೈಕ್ ಕಳ್ಳರಿಂದ ಗುಂಡೇಟಿಗೆ ಒಳಗಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಗಂಗರಾಜು (27) ಮೃತಪಟ್ಟಿರುವ ಯುವಕ.
ಚಿಕ್ಕಬಳ್ಳಾಪುರ ತಾಲೂಕು ಮರವೇನಹಳ್ಳಿ ಬಳಿ ಈ ಗುಂಡೇಟು ಪ್ರಕರಣ ನಡೆದಿತ್ತು. ಸೆ. 27ರಂದು ಬೈಕ್ ಕದಿಯಲು ಯತ್ನಿಸುತ್ತಿದ್ದಾಗ ಕಳ್ಳರನ್ನು ಗದರಿಸಿದ, ಹಿಡಿಯಲು ಹೋದಾಗ ಕಳ್ಳರು ತಪ್ಪಿಸಿಕೊಳ್ಳುವ ಸಲುವಾಗಿ ಗಂಗರಾಜು ಮೇಲೆ ಶೂಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗುಂಡು ತಗುಲಿ ಗಂಗರಾಜು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚು ಕಡಿಮೆ ಮೂರು ವಾರಗಳ ಕಾಲ ಚಿಕಿತ್ಸೆ ನೀಡಿದರೂ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಾಧ್ಯವಾಗಿರಲಿಲ್ಲ. ಈ ಘಟನೆ ಸಂಬಂಧ ಪೇರೆಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.