ಅಳವಂಡಿ: ಕ್ರೀಡೆಯಿಂದ ಯುವಕರ ದೈಹಿಕ ಕ್ಷಮತೆ ಹೆಚ್ಚಲಿದೆ. ಅಲ್ಲದೆ ಆಟಗಳು ಮಾನಸಿಕ ನೆಮ್ಮದಿಯನ್ನು ನೀಡಲಿವೆ ಎಂದು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಮುತ್ತಣ್ಣ ಬಿಸರಳ್ಳಿ ಹೇಳಿದರು.
ಸಮೀಪದ ಕವಲೂರು ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ದುರ್ಗಾದೇವಿ ಕ್ರಿಕೆಟ್ ಕ್ಲಬ್ ಹಮ್ಮಿಕೊಂಡಿದ್ದ ಮಿನಿ ಬೌಂಡರಿ ಕ್ರಿಕೆಟ್ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಭಾರತ ದೇಶ ಕ್ರೀಡೆಗಳನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ. ಗ್ರಾಮೀಣ ಆಟಗಳಾದ ಕಬಡ್ಡಿ, ಖೋ ಖೋದಿಂದ ಇಂದಿನ ಕ್ರಿಕೆಟ್‌ನವರೆಗೂ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ಯುವಕರು ಕ್ರಿಕೆಟ್‌ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಯುವಕರು ಕಬಡ್ಡಿ, ಖೋ ಖೋ ಆಟಗಳನ್ನೂ ಬೆಳೆಸಿ ಎಂದರು.
ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಕಗ್ಗಲ್ ಮಾತನಾಡಿದರು. ಪ್ರಮುಖರಾದ ಸಿದ್ದಪ್ಪ ಗಿಣಿಗೇರ, ಯಂಕಪ್ಪ ಹಿಟ್ನಾಳ, ಮುತ್ತಣ್ಣ ಬಿಸರಳ್ಳಿ, ನೀಲಪ್ಪ ಹಳ್ಳೆಪ್ಪನವರ, ಬೀಮಪ್ಪ ಶಿದ್ನೆಕೊಪ್ಪ, ನಾಗರಾಜ ಕಗ್ಗಲ್, ಮುತ್ತಯ್ಯ ಲಿಂಬಿಕಾಯಿಮಠ, ಬೀಮಪ್ಪ ಕಳಸಣ್ಣವರ, ನೀಲಪ್ಪ ಭಾವಿಕಟ್ಟಿ, ಪ್ರಕಾಶ ಬಂಡಿ, ಉಮೇಶ ವಡ್ಡರ, ನಾಗರಾಜ ಹಕ್ಕಂಡಿ, ವಿಜಯ ಪೂಜಾರ, ಬದ್ರುದ್ದೀನಶಾ ಮಕಾಂದಾರ, ನೂರ ಅಹಮದ್, ತಿಮ್ಮಣ್ಣ ಶಿದ್ನೆಕೊಪ್ಪ ಇನ್ನಿತರರಿದ್ದರು.