ಯವ, ಜನತೆ, ಓದುವ, ಆಸಕ್ತಿ, ಹೆಚ್ಚಲಿ, Youth, people, reading, interest, increase, 
ಜಿಲ್ಲೆ

ಯವಜನತೆಯಲ್ಲಿ ಓದುವ ಆಸಕ್ತಿ ಹೆಚ್ಚಲಿ

Kopala - Desk - Eraveni

ಮಾನ್ವಿ: ಸಾಹಿತ್ಯ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ದಯಪಾಲಿಸುತ್ತಾದೆ. ಅದಕ್ಕಾಗಿ ಹೆಚ್ಚು ಹೆಚ್ಚು ಸಾಹಿತ್ಯ ಓದಬೇಕು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕು ಕಸಾಪ ಹಮ್ಮಿಕೊಂಡಿದ್ದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತ್ಯ ತಿಳಿದುಕೊಂಡಷ್ಟು ಬದುಕು ವಿಸ್ತರವಾಗುತ್ತದೆ ಇಂದಿನ ಯುವಕರಲ್ಲಿ ಸಾಹಿತ್ಯ ಅಭಿರುಚಿ ಕಡಿಮೆಯಾಗುತ್ತಿದೆ.

ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ‘ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ ಜಲವೊಂದೆ ಶೌಚಮನಕ್ಕೆ ಇರೊದು ಒಂದೇ ಭೂಮಿ, ಜಲ ಯಾಕೆ ತಾರತಮ್ಯ ಎಂದು ಬಸವಣ್ಣನವರು ವಚನಗಳ ಮೂಲಕ ತಿಳಿಸಿಕೊಟ್ಟರು. ನಮ್ಮಲ್ಲಿನ ದೋಷಗಳನ್ನು ಹೇಳುವ ಕೆಲಸ ದಾಸ ಸಾಹಿತ್ಯ ಮಾಡಿದೆ. ಎಲ್ಲ ಕುಲಗಳನ್ನು ಒಂದೇ ಮಾಡುವ ಶಕ್ತಿ ಕನ್ನಡಕ್ಕೆ ಇದೆ. ಇಂತಹ ಸಾಹಿತ್ಯ ಸಮ್ಮೇಳನದಿಂದ ನಾವೆಲ್ಲರು ಒಂದೇ ಎಂದು ಗುರುತಿಸುತ್ತದೆ ಎಂದರು.

ಸಮ್ಮೇಳನಾಧ್ಯಕ್ಷ ರಮೇಶಬಾಬು ಯಾಳಗಿ, ತಾಲೂಕು ಕಸಾಪ ಅಧ್ಯಕ್ಷ ರವಿಕುಮಾರ ಪಾಟೀಲ್, ಪ್ರಮುಖರಾದ ಶಿವರಾಜ ನಾಯಕ ವಕೀಲ, ಸೈಯ್ಯದ್ ಖಾಲೀದ್ ಖಾದ್ರಿ, ಸಿದ್ದರಾಮಪ್ಪ ನೀರಮಾನ್ವಿ, ರಾಜಾ ಸುಭಾಷನಾಯಕ, ಮಲ್ಲೇಶ ಜಗ್ಲಿ, ಶಿವರಾಜ, ಚನ್ನಬಸವ ಬೆಟ್ಟದೂರು, ಸತೀಶ್ ಇಲ್ಲೂರು, ಪತ್ರಕರ್ತ ರವಿಶರ್ಮ, ದತ್ತಾತ್ರೇಯ, ಮರಿಸ್ವಾಮಿ ಇತರರಿದ್ದರು.