ಜಿಲ್ಲೆ

ಯುವಕರು ದೇಶದ ಶಕ್ತಿ: ಧರ್ಣಪ್ಪ ಪೂಜಾರಿ ಹೇಳಿಕೆ

ಬೆಳ್ತಂಗಡಿ: ಭಾರತೀಯ ಸೇನೆಗೆ ನೇಮಕಕೊಂಡಿರುವ ನಾಲ್ಕೂರು ಗ್ರಾಮದ ಕೆಂಪುಂರ್ಜ ಯುವಕ ಮನೋಹರ್​ ಪೂಜಾರಿ ಅವರನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ&ನಾಲ್ಕೂರು&ತೆಂಕಕಾರಂದೂರು ವತಿಯಿಂದ ಗೌರವಿಸಲಾಯಿತು.

ಬಳಂಜ ಸಂದ ಗೌರವಾಧ್ಯಕ್ಷ ಎಚ್​.ಧರ್ಣಪ್ಪ ಪೂಜಾರಿ ಮಾತನಾಡಿ, ಯುವಕರು ನಮ್ಮ ದೇಶದ ಶಕ್ತಿ ಮತ್ತು ಆಸ್ತಿ. ಮನೋಹರ್​ ಕಷ್ಟಪಟ್ಟು ಶಿಕ್ಷಣ ಪಡೆದು ಭಾರತೀಯ ಸೇನೆಗೆ ನೇಮಕಗೊಂಡಿರುವುದು ನಮಗೆಲ್ಲ ಅತ್ಯಂತ ಸಂತೋಷ ನೀಡಿದೆ. ಮನೋಹರ್​ ನಮ್ಮೂರಿಗೆ ಸ್ಫೂರ್ತಿ ಮತ್ತು ಪ್ರೇರಣೆ ಎಂದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್​ ಪಿ.ಕೋಟ್ಯಾನ್​, ನಿಕಟಪೂರ್ವಾಧ್ಯಕ್ಷ ಪ್ರವಿಣ್​ ಕುಮಾರ್​ ಎಚ್​.ಎಸ್​, ಕಾರ್ಯದರ್ಶಿ ಜಗದೀಶ್​ ಪೂಜಾರಿ, ನಿರ್ದೇಶಕರಾದ ಸಂತೋಷ್​ ಕುಮಾರ್​ ಕಾಪಿನಡ್ಕ, ದಿನೇಶ್​ ಪೂಜಾರಿ ಅಂತರ, ದಿನೇಶ್​ ಕೋಟ್ಯಾನ್​ ಕುದ್ರೋಟ್ಟು, ರಂಜಿತ್​ ಪೂಜಾರಿ ಮಜಲಡ್ಡ, ಜಗದೀಶ್​ ಪೂಜಾರಿ ತಾರಿಪಡ್ಪು, ಪ್ರವಿಣ್​ ಡಿ.ಕೋಟ್ಯಾನ್​, ಪ್ರದಿಪ್​ ಕುಮಾರ್​ ಮೈಂದಕುಮೇರ್​, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್​ ಅಂಚನ್​, ಮಹಿಳಾ ಬಿಲ್ಲವ ವೇದಿಕೆ ಅಧ್ಯೆ ಭಾರತಿ ಸಂತೋಷ್​, ಕಾರ್ಯದರ್ಶಿ ಅಶ್ವಿತಾ ಸಂತೋಷ್​ ಉಪಸ್ಥಿತರಿದ್ದರು.