ಉಳ್ಳಾಲ: ಜ್ವರದಿಂದ ಬಳಲುತ್ತಿದ್ದ ಉಳ್ಳಾಲದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಉಳ್ಳಾಲ ನಗರಸಭಾ ವ್ಯಾಪ್ತಿಯ ಅಕ್ಕರೆಕೆರೆ ನಿವಾಸಿ ಅಬ್ದುಲ್ ಅಝೀಝ್ ಉಸ್ತಾದ್ ಎಂಬುವರ ಪುತ್ರ ಮುಝೈನ್(22) ಮೃತ ಯುವಕ. ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಎಸ್ಸೆಸ್ಸೆಫ್ ಸಂಘಟನೆ ಮತ್ತು ಅಲ್‌ಜಝೀರಾ ದಫ್ ಸಮಿತಿ ಸಕ್ರೀಯ ಕಾರ್ಯಕರ್ತರಾಗಿದ್ದರು. ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದು ಜನಮನ್ನಣೆ ಗಳಿಸಿದ್ದರು. ಅವರು ತಂದೆ, ತಾಯಿ, ಮೂವರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.