ಜಿಲ್ಲೆ

ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಪ್ರದರ್ಶನ

ಸೌಮ್ಯ ಆರ್

ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಕಾಸರಗೋಡು ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ನೇತ್ರ ತಜ್ಞ ಡಾ.ಅನಂತ ಕಾಮತ್ ಉದ್ಘಾಟಿಸಿದರು. ಜೀವ ವಿಮಾ ನಿಗಮ ವಿಭಾಗೀಯ ಅಧಿಕಾರಿ ಮೋಹನ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.

ಕಾಸರಗೋಡು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಸಂಚಾಲಕಿ ರಾಜಯೋಗಿನಿ ಬಿ.ವಿಜಯಲಕ್ಷ್ಮೀ ಯೋಗ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ಡಾ.ಆಯಿಷಾ ಶನ, ಭಾಗ್ಯಲಕ್ಷ್ಮೀ, ವಾಣೀ, ರಾಜಯೋಗಿನಿ ಬಿ.ಕೆ.ಮಂಗಳಾ ಉಪಸ್ಥಿತರಿದ್ದರು. ಮುಕ್ತಿ ಮತ್ತು ಮೋಕ್ಷಾ ಅವರಿಂದ ಯೋಗ ಪ್ರದರ್ಶನ ನಡೆಯಿತು. ಬಿ.ಕೆ.ಶ್ವೇತಾ ಸ್ವಾಗತಿಸಿದರು. ರೇಶ್ಮಾ ಸಂಸ್ಥೆಯ ಪರಿಚಯ ನೀಡಿದರು. ವಾಣಿ ವಂದಿಸಿದರು.