ಬಂಟ್ವಾಳ: ಮನುಷ್ಯನ ಸಾಧನೆಗೆ ಏಕಾಗ್ರತೆ ಅತ್ಯಮೂಲ್ಯ. ಯೋಗಾಭ್ಯಾಸದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಬಲಗೊಳಿಸಲು ಸಾಧ್ಯವಿದೆ. ಅಮೂಲ್ಯವಾದ ಯೋಗ ವಿದ್ಯೆಯು ನಮ್ಮ ಸನಾತನ ಭಾರತೀಯರ ಕೊಡುಗೆ ಎಂದು ಯೋಗ ತರಬೇತುದಾರ ಚನ್ನಕೇಶವ ಡಿ.ಆರ್. ಹೇಳಿದರು.
ಬಂಟ್ವಾಳ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ., ಬಿ.ಆರ್.ಎಂ.ಪಿ.ಸಿ. ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್, ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಹರಿಪ್ರಸಾದ್ ಉಪಸ್ಥಿತರಿದ್ದರು. ಶ್ರೀ ಚನ್ನಕೇಶವ ಡಿ.ಆರ್. ಯೋಗ ಪ್ರಾತ್ಯಕ್ಷಿಕೆ ನೀಡಿದರು. ಉಪಪ್ರಾಂಶುಪಾಲ ಪ್ರದೀಪ್ ಪೂಜಾರಿ ಸ್ವಾಗತಿಸಿದರು. ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲಾ ಎನ್.ಸಿ.ಸಿ. ಅಧಿಕಾರಿ ರವಿ ವಂದಿಸಿದರು. ಜೂನಿಯರ್ ಅಂಡರ್ ಆಫಿಸರ್ ಸ್ಫೂರ್ತಿ ನಿರೂಪಿಸಿದರು.