ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದೇಹಕ್ಕೆ ಮತ್ತು ಮನಸ್ಸಿಗೆ ಆರೋಗ್ಯ ಕೊಡುವ ಸಾಧನವೇ ಯೋಗ. ಮಾನಸಿಕ ಹಾಗೂ ದೈಹಿಕ ಸ್ವಸ್ಥತೆ ಶಿಕ್ಷಕರಿಗೆ ಮುಖ್ಯ. ಪಠ್ಯಕ್ರಮದ ಭಾಗವಾಗಿ ಯೋಗವನ್ನು ಕಲಿಯುವುದು ಮಾತ್ರವಲ್ಲದೆ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಉಜಿರೆ ಪ್ರಕೃತಿ ಮತ್ತು ಯೋಗ ವಿಜ್ಞಾನ ವಿದ್ಯಾಲಯದ ಡೀನ್ ಡಾ.ಶಿವಪ್ರಸಾದ್ ಹೇಳಿದರು. ಎಸ್‌ಡಿಎಂ ಬಿ.ಎಡ್ ಕಾಲೇಜಿನಲ್ಲಿ ಯೋಗ ಮತ್ತು ರಂಗ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ರಂಗ ತರಬೇತಿ ನಿರ್ದೇಶಕ ಯಶವಂತ ಮಾತನಾಡಿದರು. ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಾಯಕಿ ವೀಕ್ಷಾದೀಪ, ಉಪನ್ಯಾಸಕ ವರ್ಗದವರು, ಪ್ರಥಮ ಮತ್ತು ದ್ವಿತೀಯ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಅಖಿಲಾ ಎಂ.ಪಿ. ಸ್ವಾಗತಿಸಿದರು. ಚೈತ್ಯನ್ಯ ಹಾಗೂ ಪ್ರತಿಮಾ ಅತಿಥಿಗಳನ್ನು ಪರಿಚಯಿಸಿದರು. ಮಲ್ಲಿಕಾರ್ಜುನ ಪಾಟೀಲ್ ವಂದಿಸಿದರು. ಅಕ್ಷಿತಾ ಎಂ. ಕಾರ್ಯಕ್ರಮ ನಿರೂಪಿಸಿದರು.