ಜಿಲ್ಲೆ

ನೂಡಲ್ಸ್​​ ತಿನ್ನುವ ಆಸೆಯಲ್ಲಿದ್ದ ಬೆಂಗಳೂರಿನ ಮಹಿಳೆಗೆ ಶಾಕ್​! ಮಸಾಲ ಪ್ಯಾಕೇಟ್​ನಲ್ಲಿ ಬಳಸಿದ ಬ್ಯಾಂಡೇಜ್​ ಪತ್ತೆ!

arunakunigal

ಬೆಂಗಳೂರು: ಮ್ಯಾಗಿ, ನೂಡಲ್ಸ್​ ಅಂದ್ರೆ ಮಕ್ಕಳಿಗೆ ಮಾತ್ರವಲ್ಲ, ಬಹುತೇಕ ಎಲ್ಲ ವಯೋಮಾನದವರಿಗೂ ಇಷ್ಟ. ಎರಡೇ ನಿಮಿಷದಲ್ಲಿ ತಿಂದು ಮುಗಿಸುವ ತವಕ. ಅಷ್ಟೊಂದು ಇಷ್ಟಪಟ್ಟು ತಿನ್ನುವ ನೂಡಲ್ಸ್​ನಲ್ಲಿ ಸಿಗಬಾರದ್ದು ಸಿಕ್ಕಿ ಬಿಟ್ಟರೆ?

ಅಷ್ಟಕ್ಕೂ ಈಗ ಏನು ಸಿಕ್ತು ಅಂತೀರಾ? ನೂಡಲ್ಸ್​ ಮಸಾಲ ಪ್ಯಾಕೇಟ್​ನಲ್ಲಿ ಬಳಸಿದ ಬ್ಯಾಂಡೇಜ್​ ಪತ್ತೆಯಾಗಿದೆ! ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಮಾನಸ ಎಂಬುವವರು ಮನೆ ಸಮೀಪದ ಅಂಗಡಿಯೊಂದರಲ್ಲಿ ನೂಡಲ್ಸ್ ಪ್ಯಾಕೇಟ್​ ಖರೀದಿಸಿದ್ದರು. ನೂಡಲ್ಸ್​ ಬೇಯಿಸಲು ಮನೆಯಲ್ಲಿ ಪ್ಯಾಕೇಟ್​ ಓಪನ್​ ಮಾಡಿದ್ದಾರೆ. ಆಗ ಮಸಾಲ ಪ್ಯಾಕೇಟ್​​ನಲ್ಲಿ ಮಸಲಾ ಪುಡಿ ಜತೆಗೆ ಬಳಸಿದ ಬ್ಯಾಂಡೇಜ್​ ಇರುವುದನ್ನ ನೋಡಿ ಶಾಕ್​ ಆಗಿದ್ದಾರೆ. ಬ್ಯಾಂಡೇಜ್​ ಇರುವ ಫೋಟೋವನ್ನು 'ವಿಜಯವಾಣಿ' ಪತ್ರಿಕೆಗೆ ಮಾನಸ ಅವರ ಸಹೋದರಿ ಮಂದಾರ ಕಳುಹಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರತಿ ನೂಡಲ್ಸ್​ನ ಪ್ಯಾಕೆಟ್​ ಒಳಗೆ ಮಸಲಾ ಪುಡಿಯ ಚಿಕ್ಕದೊಂದು ಪ್ಯಾಕೇಟ್​ ಇರುತ್ತೆ. ಅದರಲ್ಲಿ ಬ್ಯಾಂಡೇಜ್​ ಸಿಕ್ಕಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ. ನೂಡಲ್ಸ್ ತಯಾರಿಕಾ ಕಂಪನಿಯಲ್ಲೇ ದುರುದ್ದೇಶದಿಂದಲೇ ಯಾರಾದರೂ ಹಾಕಿರಬಹುದೇ? ಅಥವಾ ಸಿಬ್ಬಂದಿ ಬೇಜವಾಬ್ದಾರಿಯಿಂದ ಬಳಸಿದ್ದ ಬ್ಯಾಂಡೇಜ್​ ಅನ್ನು ಮಸಾಲ ಪುಡಿ ತಯಾರಿಕಾ ಘಟಕದಲ್ಲಿ ಬೀಳಿಸಿದ್ದು, ಆಕಸ್ಮಿಕವಾಗಿ ಇದು ಪ್ಯಾಕಿಂಗ್​ ಆಯಿತೇ? ಇದ್ಯಾವುದಕ್ಕೂ ಉತ್ತರ ಸಿಕ್ಕಿಲ್ಲ.