ಕುರುಗೋಡು ತಾಲೂಕಿನ ಯರ‌್ರಂಗಳಿ ಗ್ರಾಪಂ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ.ಹುಲಿಗೆಮ್ಮ ನಾಗರಾಜ ಮತ್ತು ಯರ‌್ರಂಗಳಿ ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಯರ‌್ರಂಗಳಿ ಮಹೇಶಗೌಡ, ಮಲ್ಲಿಕಾರ್ಜುನಗೌಡ, ಎಂ.ವೀರೇಶಪ್ಪ, ನಾಗಪ್ಪ, ತಾಪಂ ಮಾಜಿ ಸದಸ್ಯ ಬಸವರಾಜ, ಆದೆಪ್ಪ, ಆರ್.ಹನುಮಂತರೆಡ್ಡಿ, ಮೆಟ್ರಿಕಿ ನಾಗರಾಜಗೌಡ, ಬಿ.ನಾಗರಾಜ ಇತರರಿದ್ದರು. 
ಜಿಲ್ಲೆ

ಯರ‌್ರಂಗಳಿ ಗ್ರಾಪಂಗೆ ಹುಲಿಗೆಮ್ಮ ಮಲ್ಲಯ್ಯ ಅಧ್ಯಕ್ಷೆ

ಕುರುಗೋಡು: ತಾಲೂಕಿನ ಯರ‌್ರಂಗಳಿ ಗ್ರಾಪಂಗೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಎಸ್ಟಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹುಲಿಗೆಮ್ಮ ಕೆ.ಮಲ್ಲಯ್ಯ 11 ಮತ ಪಡೆದರೆ, ಎಂ.ಹುಲಿಗೆಮ್ಮ ನಾಗರಾಜ 13 ವೋಟ್ ಪಡೆದು ಜಯಗಳಿಸಿದರು. ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಯರ‌್ರಂಗಳಿ ತಿಮ್ಮಪ್ಪ 13 ಮತ ಪಡೆದು ಜಯ ಕಂಡರೆ, ಜಾಲಹಳ್ಳಿ ಭೀಮರೆಡ್ಡಿ 11 ವೋಟ್ ಗಳಿಸಿ ಪರಾಭವಗೊಂಡರು ಎಂದು ಚುನಾವಣಾಧಿಕಾರಿ ವಿಜಯಲಕ್ಷ್ಮೀ ಘೋಷಿಸಿದರು.

ಪಿಡಿಒ ರಾಮಾರಾವು, ಪ್ರಮುಖರಾದ ಯರ‌್ರಂಗಳಿ ಮಹೇಶಗೌಡ, ಮಲ್ಲಿಕಾರ್ಜುನಗೌಡ, ಎಂ.ವೀರೇಶಪ್ಪ, ನಾಗಪ್ಪ, ತಾಪಂ ಮಾಜಿ ಸದಸ್ಯ ಬಸವರಾಜ, ಆದೆಪ್ಪ, ಆರ್.ಹನುಮಂತರೆಡ್ಡಿ, ಮೆಟ್ರಿಕಿ ನಾಗರಾಜಗೌಡ, ಬಿ.ನಾಗರಾಜ ಇತರರಿದ್ದರು.