ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದ ಹೆಸರು ಹೊಲಕ್ಕೆ ಕೃಷಿ ಅಧಿಕಾರಿ ಶೀವಪ್ಪ ಕೊಂಡಗುರಿ ಭೇಟಿ ನೀಡಿ ಹಳದಿರೋಗ ನಿಯಂತ್ರಣ ಕುರಿತು ರೈತನಿಗೆ ಸಲಹೆ ನೀಡಿದರು. 
ಜಿಲ್ಲೆ

ಹೆಸರು ಬೆಳೆಗೆ ಹಳದಿ ನಂಜಾಣು ರೋಗ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ತಾಲೂಕಿನ ನಾನಾ ಕಡೆ ಬಿತ್ತನೆಯಾದ ಹೆಸರು ಬೆಳೆಗೆ ಹಳದಿರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗೆದಗೇರಿ, ತೊಂಡಿಹಾಳ, ಬಂಡಿಹಾಳ ಜಮೀನುಗಳಿಗೆ ಕೃಷಿ ಅಧಿಕಾರಿ ಶಿವಪ್ಪ ಕೊಂಡಗುರಿ ಈಚೆಗೆ ಭೇಟಿ ನೀಡಿ ರೋಗ ನಿಯಂತ್ರಣ ಕುರಿತು ರೈತರಿಗೆ ಸಲಹೆ ನೀಡಿದರು.

ಯಲಬುರ್ಗಾ ಹೋಬಳಿಯಲ್ಲಿ ಮುಂಗಾರಿನಲ್ಲಿ ಬಿತ್ತನೆಯಾದ ಹೆಸರು ಬೆಳೆ ಸಮೃದ್ಧವಾಗಿ ಬೆಳೆದಿದೆ. ಈಗ ಕಾಯಿ ಕಟ್ಟುವ ಹಂತದಲ್ಲಿದ್ದು, ಅಲ್ಲಲ್ಲಿ ಹಳದಿ ನಂಜಾಣು ರೋಗ ಕಾಣಿಸಿಕೊಳ್ಳುತ್ತಿದೆ.

ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲಕ್ಕೆ ಹೂಳಬೇಕು. ಇಲ್ಲವೇ ಸುಡಬೇಕು. ಹಳದಿರೋಗ ನಿಯಂತ್ರಣಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ಔಷಧ ಲಭ್ಯವಿದ್ದು, ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆಗೆ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.