ಯಲಬುರ್ಗಾ: ಗಿಡ, ಮರ ಬೆಳೆಸಲು ಪ್ರತಿಯೊಬ್ಬರೂ ಮುಂದಾದಾಗ ಮಾತ್ರ ನಮಗೆ ಉಸಿರಾಡಲು ಶುದ್ಧ ಗಾಳಿ ಸಿಗುತ್ತದೆ ಎಂದು ಮುಖ್ಯಶಿಕ್ಷಕ ಬಾಬುಸಾಬ್ ಲೈನದಾರ್ ಹೇಳಿದರು.
ತಾಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಗಂಧ ಇಕೋ ಕ್ಲಬ್, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ಜೀವನ ಮರಗಿಡಗಳ ಮೇಲೆಯೇ ಅವಲಂಬಿಸಿದೆ. ಆಹಾರ, ಆಮ್ಲಜನಕ, ಉಡುವ ಬಟ್ಟೆ ಪ್ರತಿಯೊಂದೂ ಮರಗಿಡಗಳ ಬಳುವಳಿ. ಇದನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿರುವುದು ದುರಂತ ಸಂಗತಿ ಎಂದರು.
ಇದನ್ನೂ ಓದಿ: ಪರಿಸರ ರಕ್ಷಣೆ ಎಲ್ಲರ ಕರ್ತವ್ಯ
ವಿಜ್ಞಾನ ಶಿಕ್ಷಕ ದೇವೇಂದ್ರ ಜಿರ್ಲಿ, ಎಸ್‌ಕೆಡಿಆರ್‌ಡಿಪಿ ಸಂಸ್ಥೆ ಮೇಲ್ವಿಚಾರಕಿ ಶಿಲ್ಪಾ ಮಾತನಾಡಿದರು. ಶಾಲೆಗೆ ಬಣ್ಣ ಹಾಗೂ ಬರವಣಿಗೆ ಕಾರ್ಯದಲ್ಲಿ ಭಾಗಿಯಾದ ಗಾಣಧಾಳ ಅತಿಥಿ ಶಿಕ್ಷಕ ಶರಣು ವಾಳದ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಕೆಡಿಆರ್‌ಡಿಪಿ ಸಂಸ್ಥೆ ಪ್ರತಿನಿಧಿಗಳಾದ ದೀಪಾ, ಮೆಹಮುದಾಬೇಗಂ, ಶಿಕ್ಷಕರಾದ ವೆಂಕಟಲಕ್ಷ್ಮೀ ಶೋಭಾ ಬಾಗೇವಾಡಿ, ರಮೇಶ್, ತಿಮ್ಮಣ್ಣ ಜಗ್ಗಲ್ ಇತರರಿದ್ದರು.