ಪರಿಸರ ರಕ್ಷಣೆ ಎಲ್ಲರ ಕರ್ತವ್ಯ

6ark1
ಅರಕಲಗೂಡು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡಗಳನ್ನು ನೆಡಲಾಯಿತು. ರಮೇಶ್ ಕುಮಾರ್, ಸೀತಾರಾಮ್ ಭಟ್, ಜಯರಾಮ, ಯೋಗನಾಥ್ ಇದ್ದರು.
Published on

ಅರಕಲಗೂಡು: ಮಾನವ ಜನಾಂಗ ಮತ್ತು ಪ್ರಾಣಿ, ಪಕ್ಷಿಗಳ ಉಳಿವಿಗೆ ಪರಿಸರ ರಕ್ಷಣೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಜಲಾನಯನ ಅಭಿವೃದ್ಧಿ ಅರಣ್ಯ ಘಟಕದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು. ಮುಂದಿನ ಪೀಳಿಗೆಗಾಗಿ ಮಾನವ ಸಂಕುಲ ಮತ್ತು ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಹಾಗೂ ಮಾಲಿನ್ಯ ರಹಿತ ಜೀವನಕ್ಕಾಗಿ ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮ್ ಭಟ್ ಮಾತನಾಡಿ, ಇಂದಿನ ಯುವ ಜನಾಂಗ ಸಾವಯವ ಕೃಷಿ ಮತ್ತು ಯಥೇಚ್ಚವಾಗಿ ಗಿಡಗಳನ್ನು ಬೆಳೆಸಿ ರೇಷ್ಮೆ ಕೃಷಿ ಮಾಡುವ ಕಡೆ ಗಮನ ಹರಿಸಲು ಮತ್ತು ಸ್ವ ಉದ್ಯೋಗ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ತಿಳಿಸಿದರು.

ಐಟಿಐ ಸಂಸ್ಥೆಯ ತರಬೇತಿ ಅಧಿಕಾರಿ ಜಯರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಎ.ಎಸ್.ಯೋಗನಾಥ್, ಪುನೀತಾ, ವಸಂತ ಮಲ್ಲಿಕಾರ್ಜುನ, ಸ್ಮಿತಾ, ಮಹೇಶ್, ಜಲಾನಯನ ಇಲಾಖೆಯ ನೌಕರ ಪ್ರದೀಪ್ ಇದ್ದರು. ಸಂಸ್ಥೆಯ ಆವರಣದಲ್ಲಿ ವಿವಿಧ ಜಾತಿಯ 50 ಗಿಡಗಳನ್ನು ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net