ಜಿಲ್ಲೆ

ಯಕ್ಷಗಾನ ತರಬೇತಿ ಉದ್ಘಾಟನೆ

ಇಂದಿರಾ ಎನ್ ಕೆ

ಜನ್ನಾಡಿ: ಜಗತ್ತಿನ ಲಲಿತಕಲೆಗಳಲ್ಲಿ ಯಕ್ಷಗಾನಕ್ಕೆ ಅಗ್ರಸ್ಥಾನ. ಇಂತಹ ದೇವಕಲೆಯನ್ನು ಅಕ್ಷರ ಶಿಕ್ಷಣದ ಜತೆಗೆ ಪಸರಿಸುವ ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯ ಶ್ಲಾಘನಾರ್ಹ ಎಂದು ನಿವೃತ್ತ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ದಿನಕರ ಹೆಗ್ಡೆ ಹೇಳಿದರು.

ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಬಿದ್ಕಲ್ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ಆಯೋಜಿಸಿದ ಯಕ್ಷಗಾನ ತರಬೇತಿ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಉಪ ಪ್ರಾಂಶುಪಾಲ ಮೊಗೆಬೆಟ್ಟು ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಾಗವತ ಪ್ರಸಾದ್‌ಕುವಾರ್ ಮೊಗೆಬೆಟ್ಟು ಉಪಸ್ಥಿತರಿದ್ದರು. ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ನಾಗರಾಜ ಎನ್. ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ವಂದಿಸಿದರು.