ಜಿಲ್ಲೆ

ಯಕ್ಷಗಾನಕ್ಕಿದೆ ಉತ್ತಮ ಆರೋಗ್ಯ ನೀಡುವ ಶಕ್ತಿ

ಕೋಟ: ಶಿಸ್ತು ಬದ್ಧವಾಗಿ ಮಾತನಾಡುವ ಶಕ್ತಿಯನ್ನು ಯಕ್ಷಗಾನ ಕಲಿಸಿಕೊಡುತ್ತದೆ. ಶುದ್ಧ ಕನ್ನಡ ಮಾತನಾಡಲು ಸಹಕರಿಸುತ್ತದೆ. ಮನಸ್ಸಿಗೆ ಮುದ ನೀಡುವ, ದೇಹಕ್ಕೆ ಖುಷಿ ನೀಡಿ ಉತ್ತಮ ಆರೋಗ್ಯವನ್ನು ನೀಡುವಂತಹ ಶಕ್ತಿ ಯಕ್ಷಗಾನಕ್ಕಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಹಂಗಾರಕಟ್ಟೆ ಐರೋಡಿಯ ಗುಂಡ್ಮಿಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಭಾನುವಾರ ಯಕ್ಷಗಾನ ನೃತ್ಯ ಅಭಿನಯ ತರಬೇತಿಯ 13ನೇ ವರ್ಷದ ಶಿಬಿರ ನಲಿ ಕುಣಿಗೆ ಚಾಲನೆ ನೀಡಿ ಮಾತನಾಡಿದರು. ಕಲಾಕೇಂದ್ರ ಅಧ್ಯಕ್ಷ ಆನಂದ.ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು.

ಕೋಟೇಶ್ವರ ಗೀತಾ ಎಚ್.ಎಸ್‌ಎನ್‌ಫೌಂಡೇಶನ್‌ಅಧ್ಯಕ್ಷ ಅಮವಾಸೆಬೈಲ್ ಶಂಕರ ಐತಾಳ, ಯಕ್ಷಗುರು ಕೆ.ಸದಾನಂದ ಐತಾಳ ಇದ್ದರು. ಕಲಾಕೇಂದ್ರ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ವೈಕುಂಠ ಹೇರ್ಳೆ ವಂದಿಸಿದರು. ಗುಂಡ್ಮಿ ರಾಮಚಂದ್ರ ಐತಾಳ ನಿರೂಪಿಸಿದರು.