ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಮಹತ್ತರವಾದದ್ದು. ಯಕ್ಷಗಾನ, ತಾಳಮದ್ದಳೆ ಪ್ರಕಾರಗಳು ಇಂದಿಗೂ ತನ್ನ ಮೌಲ್ಯ ಉಳಿಸಿಕೊಂಡಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಮೀಯಪದವು ಶ್ರೀ ಗುರುನರಸಿಂಹ ಯಕ್ಷಬಳಗ ಕಲಾಸಂಸ್ಥೆ ಹಾಗೂ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಯೋಗದೊಂದಿಗೆ ಕ್ಷೇತ್ರದ ವಠಾರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಯಕ್ಷಚಿಗುರು-2025 ಸಮಾರಂಭದಲ್ಲಿ ಮಧೂರು ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಸಂಘಕ್ಕೆ ಯಕ್ಷಚಿಗುರು-2025 ಪ್ರಶಸ್ತಿ ಪ್ರದಾನಗೈದು ಆಶೀರ್ವಚನ ನೀಡಿದರು.
ಮೀಯಪದವು ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘದ ಸದಸ್ಯರ ಕುಣಿತ ಭಜನೆಯನ್ನು ಚಿಗುರುಪಾದೆ ದೇವಸ್ಥಾನ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಉದ್ಘಾಟಿಸಿದರು. ಉದ್ಯಮಿ ಪಿ.ಆರ್.ಶೆಟ್ಟಿ ಪೊಯ್ಯೇಲು ಕುಳೂರು ಅಧ್ಯಕ್ಷತೆ ವಹಿಸಿದ್ದರು. ಉಳಿಯತ್ತಾಯ ವಿಷ್ಣು ಆಸ್ರ ಗೌರವ ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಹೇರೂರು ವಿಷ್ಣುಮೂರ್ತಿ ದೇವಸ್ಥಾನ ತಾಡ ಕ್ಷೇತ್ರದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇರೂರು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ ಕುಳೂರು ಪೊಯ್ಯೇಲು, ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ ಶೆಟ್ಟಿ ಎಲಿಯಾಣ ಕುಳೂರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯೋಜಕತ್ವದಲ್ಲಿ ಶ್ರೀನಿವಾಸ ರಾವ್ ಮದಂಗಲ್ಲು ಅವರ ಸಂಸ್ಮರಣೆ ನಡೆಯಿತು. ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ ಶೆಟ್ಟಿ ಎಲಿಯಾಣ ಕುಳೂರು, ಹಿರಿಯ ಭಜನಾ ಸಂಕೀರ್ತನಕಾರ ವಸಂತ ಭಟ್ ತೊಟ್ಟೆತ್ತೋಡಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾಗದ ವಧೆ ಯಕ್ಷಗಾನ ತಾಳಮದ್ದಳೆ, ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗ ತಂಡದವರಿಂದ ರುಕ್ಮಾಂಗದ ಚರಿತ್ರೆ ಯಕ್ಷಗಾನ ಬಯಲಾಟ ಪ್ರಸ್ತುತಿಗೊಂಡಿತು.