ಜಿಲ್ಲೆ

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಸರ್ಕಾರಿ ಶಾಲೆಯ ಶಿಥಿಲ ಕಟ್ಟಡ

reportermys

ಗುಂಡ್ಲುಪೇಟೆ: ತಾಲೂಕಿನ ಯಡವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕಾಮಗಾರಿ ನಡೆದು ಸುಮಾರು 20 ವರ್ಷಗಳೇ ಕಳೆದಿವೆ.

ಪ್ರಸ್ತುತ ಶಿಥಿಲಾವಸ್ಥೆ ತಲುಪಿರುವ ಕಟ್ಟಡ ಜೋರು ಮಳೆ ಬಿದ್ದರೆ ನೆಲಕ್ಕುರುಳುವ ಸಂಭವವಿದೆ. ಶಾಲೆ ಗ್ರಾಮದೊಳಗೆ ಇರುವುದರಿಂದ ಆಟವಾಡಲು ದಿನನಿತ್ಯ ಹತ್ತು ಹಲವಾರು ಮಕ್ಕಳು ಗುಂಪುಗೂಡುತ್ತವೆ.

ಅಷ್ಟೇ ಅಲ್ಲದೆ ಇದೇ ರಸ್ತೆಯ ಅಂಚಿನಲ್ಲಿ ಪ್ರತಿದಿನ ನೂರಾರು ಗ್ರಾಮಸ್ಥರು ತಿರುಗಾಡುವುದರಿಂದ ಅನಾಹುತ ಸಂಭವಿಸುವ ಮುನ್ಸೂಚನೆ ಕಾಣುತ್ತಿದೆ. ಆದ್ದರಿಂದ ದುರಂತ ನಡೆಯುವ ಮುನ್ನ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ