ಜಿಲ್ಲೆ

ಶ್ರೀ ವೆಂಕಟರಮಣ ಕ್ಷೇತ್ರದಲ್ಲಿ ಆರಾಧನೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಗುರುರಾಘವೇಂದ್ರ ಅರಾಧನಾ ಮಹೋತ್ಸವ ಇತ್ತೀಚೆಗೆ ಜರುಗಿತು.

ಕ್ಷೇತ್ರ ತಂತ್ರಿ ಉಳಿಯತ್ತಾಯ ವಿಷ್ಣು ಅಸ್ರ ನೇತೃತ್ವದಲ್ಲಿ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪಾದಪೂಜೆ, ಹೂವಿನ ಪೂಜೆ, ಶ್ರೀರಂಗ ಪೂಜೆ ಹಾಗೂ ರಾತ್ರಿ ಸಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಿದವು. ಪದ್ಮಪ್ರಿಯ ಮಹಿಳಾ ಭಜನಾ ಸಂಘದಿಂದ ಭಜನೆ, ಮಧೂರು ಪದ್ಮನಾಭ ಸರಳಾಯ ಶಿಷ್ಯವೃಂದದಿಂದ ಸಂಗೀತ ಕಚೇರಿ, ಧನ್ವಂತರಿ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.

ಪ್ರಮುಖರಾದ ವೆಂಕಟ್ರಮಣ ಹೊಳ್ಳ, ರಾಮಕೃಷ್ಣ ಹೊಳ್ಳ, ಶ್ರೀನಿವಾಸ ಹೊಳ್ಳ, ತುಕರಾಮ ಆಚಾರ್ಯ, ಪ್ರಮೋದ್ ಕುಮಾರ್, ಪುರಂದರ ಶೆಟ್ಟಿ, ತಿರುಮಲೇಶ್ ಹೊಳ್ಳ, ಶೇಷಾದ್ರಿ ಹೊಳ್ಳ, ರವಿ ಕೇಸರಿ, ಕಿಶೋರ್ ಕುಮಾರ್, ವಸಂತ ಕೆರೆಮನೆ, ರೂಪಕಲಾ ಹೊಳ್ಳ, ಶ್ರೀದೇವಿ ಎಸ್ ರಾವ್, ಸವಿತಾ ಕಿಶೋರ್, ಸೌಮ್ಯಾ ಶಂಕರ, ಪ್ರೇಮಾ ಪುರಂದರ, ವಿಜಯ ಶೆಟ್ಟಿ, ಅರುಣಾ ಕುಮಾರಿ, ಗೀತಾ ತುಕರಾಮ, ಸಿಂಧು ಭಾಸ್ಕರ, ಬಿಂದು ರವಿ ಮೊದಲಾದವರಿದ್ದರು.