ಸಿಂಧನೂರಿನ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಎಂಎಲ್‌ಸಿ ಬಸನಗೌಡ ಬಾದರ್ಲಿ, ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಬಿಜೆಪಿ ಮುಖಂಡ ಈರೇಶ ಇಲ್ಲೂರು, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಬಿಜೆಪಿ ತಾಲೂಕು ಅಧ್ಯಕ್ಷ ವೆಂಕೋಬ ನಾಯಕ ಇದ್ದರು. 
ಜಿಲ್ಲೆ

ಲೌಕಿಕ ಬದುಕು ಸರಿದೂಗಿಸುವ ಮಾರ್ಗ

Kopala - Desk - Eraveni

ಸಿಂಧನೂರು: ಸಂತ ಶ್ರೇಷ್ಠ ಕನಕದಾಸ ಕೃತಿಗಳ ಮೂಲಕ ಸಮಾನತೆ ಮತ್ತು ಮನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಕನಕದಾಸರು ಲೌಕಿಕ ಬದುಕನ್ನು ಸರಿದೂಗಿಸುವ ಮಾರ್ಗ ಕಂಡುಕೊಂಡು ದಾಸ ಶ್ರೇಷ್ಠರಾಗಿ, ಕೀರ್ತನಕಾರರಾಗಿ, ಸಮಾಜದಲ್ಲಿ ಸಾಮರಸ್ಯದ ಬದುಕಿನ ವಾತಾವರಣ ನಿರ್ಮಾಣ ಮಾಡಿದರು. ಅವರ ಆದರ್ಶದ ಬದುಕು ನಮ್ಮೇಲ್ಲರಿಗೆ ಸ್ಪೂರ್ತಿ. ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ದುಡಿಯುವ ಮತ್ತು ಮೇಲ್ವರ್ಗದ ಜನರ ಮಧ್ಯೆ ಸಮಾನತೆ ಸಾಧಿಸಲು ಧಾರ್ಮಿಕ ನೆಲೆ ಮೂಲಕ ಸಾಮಾಜಿಕ ಹೋರಾಟವನ್ನು ಮಾಡಿದ ಕನಕದಾಸರ ಸಾಮಾಜಿಕ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದರು.

ಎಂಎಲ್‌ಸಿ ಬಸನಗೌಡ ಬಾದರ್ಲಿ, ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಬಿಜೆಪಿ ಮುಖಂಡ ಈರೇಶ ಇಲ್ಲೂರು, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಬಿಜೆಪಿ ತಾಲೂಕು ಅಧ್ಯಕ್ಷ ವೆಂಕೋಬ ನಾಯಕ, ಎಚ್.ಎನ್.ಬಡಿಗೇರ, ಮಲ್ಲಪ್ಪ ಮಾಡಗಿರಿ,

ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಭೀಮಣ್ಣ ವಕೀಲ, ಗಂಗಣ್ಣ ಡಿಶ್, ಸುರೇಶ ಸುಕಾಲಪೇಟೆ, ಮಲ್ಲಪ್ಪ ಮೈಲಾರ, ಅಮರೇಶ ಗುರಿಕಾರ, ಫಕೀರಪ್ಪ ತಿಡಿಗೋಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಕೆರೇಗೌಡ ಪೊಪಾ., ಪಿಐ ದುರುಗಪ್ಪ, ಸಿದ್ರಾಮಪ್ಪ ಮಾಡಸಿರವಾರ, ಲಕ್ಷ್ಮಣ ಭೋವಿ ಇತರರಿದ್ದರು.