ಮುದಗಲ್: ದೇಶದಲ್ಲಿ ಎಲ್ಲರಿಗೂ ಹಕ್ಕು ಮತ್ತು ನ್ಯಾಯ ಕಲ್ಪಿಸಿರುವ ಸಂವಿಧಾನದ ಆಶಯಗಳಿಗೆ ಬದ್ಧರಾಗಿರೋಣ ಎಂದು ಲಿಂಗಸುಗೂರು ತಹಸೀಲ್ದಾರ್ ಮಲ್ಲಪ್ಪ ಯರಗೋಳ ಹೇಳಿದರು.
ಪಟ್ಟಣದ ಪುರಸಭೆ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ. ಭಾರತದ ಸಾರ್ವಭೌಮತ್ವವನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಎಂದರು.
ತಾಪಂ ಇಒ ಅಮರೇಶ ಯಾದವ್ ಮಾತನಾಡಿ, ಜಾಥಾದಿಂದ ಸಂವಿಧಾನ ಅರಿವು ಪ್ರತಿಯೊಬ್ಬರ ಮನ ಮತ್ತು ಮನೆಗಳಿಗೆ ತಲುಪಿದೆ ಎಂದರು.
ಇದಕ್ಕೂ ಮುನ್ನ ಸಂವಿಧಾನ ಜಾಗೃತಿ ಜಾಥಾವನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಹಿಳೆಯರು ಕಳಸ ಮತ್ತು ವಾದ್ಯಮೇಳ ಗಮನ ಸಳೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಉಮೇಶ, ಉಪತಹಸೀಲ್ದಾರ್ ತುಳಜಾರಾಮ ಸಿಂಗ್, ಪುರಸಭೆ ಮುಖ್ಯಾಧಿಕಾರಿ ನಬಿಸಾಬ ಕಂದಗಲ್, ಅಕ್ಷರ ದಾಸೋಹ ತಾಲೂಕು ಅಧಿಕಾರಿ ನಾಗನಗೌಡ ಬಯ್ಯಪುರ, ಸಂವಿಧಾನ ಜಾಗೃತಿ ಜಾಥಾ ನೋಡಲ್ ಅಧಿಕಾರಿ ಚನ್ನಬಸಪ್ಪ ಆದಾಪುರ, ಪರಶುರಾಮ ಕಟ್ಟಿಮನಿ, ಶಿಕ್ಷಣ ಇಲಾಖೆ ಸಂತೋಷ, ಉಪನ್ಯಾಸಕರಾದ ಮಲ್ಲಪ್ಪ ದೇವರಗುಡಿ, ನಾಗಣ್ಣ ಬಿರಾದರ ಇದ್ದರು.