More

    ಬಹುಮತವಿದ್ದರೂ ವಿಶ್ವಾಸಮತ ಯಾಚನೆಗೆ ಮುಂದಾದ ಕೇಜ್ರಿವಾಲ್​; ಕಾರಣ ಹೀಗಿದೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ನಿರ್ಣಯ ಮಂಡಿಸಿದ್ದು, ಶನಿವಾರ ನಡೆಯುವ ಕಲಾಪದಲ್ಲಿ ಸ್ತಾವನೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ದೆಹಲಿ ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಅರವಿಂದ್​ ಕೇಜ್ರಿವಾಲ್​ ನಮ್ಮ ಸರ್ಕಾರದ ಮೇಲೆ ಒಂದಲ್ಲ ಒಂದು ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಸದಸ್ಯರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಅಂಬಾನಿ ಒಡೆತನದ ಆಂಟಿಲಿಯಾದ ಒಳಾಂಗಣ ವಿನ್ಯಾಸಗಾರ್ತಿ ಯಾರು ಗೊತ್ತಾ; ಖ್ಯಾತ ನಟನ ಪತ್ನಿ ಈಕೆ

    ಅಬಕಾರಿ ನೀತಿಗೆ ಸಂಬಂಧಿಸಿದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರು ಹಾಗೂ ಶಾಸಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ನಮ್ಮ ಪಕ್ಷದ ನಾಯಕರು ಹಾಗೂ ಶಾಸಕರು ಎಎಪಿ ಬಿಟ್ಟು ಬೇರೆ ಪಕ್ಷಗಳತ್ತ ಹೋಗುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ದೆಹಲಿ ಸರ್ಕಾರದಲ್ಲಿ ಅಗತ್ಯ ಸಂಖ್ಯಾಬಲ ಇಲ್ಲ ಎಂದೆಲ್ಲಾ ಹೇಳುತ್ತಿದ್ಧಾರೆ.

    ನಮ್ಮ ಶಾಸಕರು ನಮ್ಮಲ್ಲಿಯೇ ಇದ್ದರೆ, ಅವರು ಎಲ್ಲಿಯು ಹೋಗಿಲ್ಲ. ಇದನ್ನು ನಾವು ಜನರ ಮುಂದೆ ಸಾಬೀತು ಮಾಡಬೇಕಿದೆ. ಈ ಕಾರಣಕ್ಕೆ ನಾನು ವಿಶ್ವಾಸ ನಿರ್ಣಯವನ್ನು ಮಂಡಿಸುತ್ತೇನೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ಆಮ್ ಆದ್ಮಿ ಪಕ್ಷದ ಶಾಸಕರನ್ನು ಭೇಟಿ ಮಾಡಿ ತಮ್ಮ ಬಳಿ ಸೆಳೆಯುತ್ತಿದ್ದಾರೆ ಮತ್ತು ಅವರು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದರೆ ಎಂಬ ಆರೋಪಗಳು ಕೆಲವು ದಿನಗಳ ಹಿಂದೆ ಬರುತ್ತಿತ್ತು. ಈ ಕಾರಣಕ್ಕೆ ನಾನು ಈ ಕ್ರಮವನ್ನು ಅನುಸರಿಸಬೇಕಿದೆ ಎಂದು ಅರವಿಂದ್​ ಕೇಜ್ರಿವಾಲ್ ವಿಧಾನಸಭೆಯಲ್ಲಿ​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts