ಶಾಲ ವಠಾರದಲ್ಲಿ ಸಸಿಗಳನ್ನು ನೆಟ್ಟುಬೆಳೆಸುವ ಯೋಜನೆಗೆ ಡಾ.ಸಪ್ನಾ ಜೆ.ಉಕ್ಕಿನಡ್ಕ ಸಸಿ ನೆಡುವ ಮೂಲಕ ಚಾಲನೆ ನೀಡಿದರು.  
ಜಿಲ್ಲೆ

ಮಕ್ಕಳಲ್ಲಿ ಮೂಡಲಿ ಸಂರಕ್ಷಣೆ ಕಾಳಜಿ : ವೈದ್ಯೆ ಡಾ.ಸಪ್ನಾ ಜೆ.ಉಕ್ಕಿನಡ್ಕ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಮೂಡಿಸುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದು ವೈದ್ಯೆ ಡಾ.ಸಪ್ನಾ ಜೆ.ಉಕ್ಕಿನಡ್ಕ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಎಸ್.ಎನ್.ನೇಚರ್ ಕ್ಲಬ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮುಖ್ಯಶಿಕ್ಷಕ ಎನ್.ಕೇಶವ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ವೆಂಕಟ್ರಾಜ ಮಿತ್ರ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ್ ಪೆರ್ಲ, ಉಪಾಧ್ಯಕ್ಷ ನಾರಾಯಣ ನಾಯಕ್ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಸಸ್ಯಗಳನ್ನು ಗುರುತಿಸುವ ಸ್ಪರ್ಧೆ ಆಯೋಜಿಸಲಾಯಿತು. ನಂತರ ಪ್ರತಿ ತರಗತಿಗೆ ಸಸಿಗಳನ್ನು ವಿತರಿಸಿ, ಇದನ್ನು ಶಾಲಾ ಪರಿಸರದಲ್ಲಿ ನೆಟ್ಟು, ಅದರ ಪೋಷಣೆ ಜವಾಬ್ದಾರಿ ವಿದ್ಯಾರ್ಥಿಗಳಿಗೆ ವಹಿಸಿಕೊಡಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಅತಿಥಿಗಳಿಗೆ ವಿವಿಧ ಪ್ರಭೇದಗಳ ಸಸ್ಯಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಶಿಕ್ಷಕರಾದ ನೇಚರ್ ಕ್ಲಬ್ಬಿನ ಉಮೇಶ್ ಕೆ.ಪೆರ್ಲ ಸ್ವಾಗತಿಸಿದರು. ಅಕ್ಷತಾ ಟೀಚರ್ ನಿರೂಪಿಸಿದರು. ಪ್ರವೀಣ್ ಮಾಸ್ಟರ್ ವಂದಿಸಿದರು. ನಂತರ ಶಾಲಾ ವಠಾರದಲ್ಲಿ ವಿವಿಧ ಪ್ರಬೇದಗಳ ಸಸ್ಯಗಳನ್ನು ನೆಡಲಾಯಿತು.