ಜಿಲ್ಲೆ

ಸಾರ್ವಜನಿಕರ ಸೇವೆಗೆ ಒಗ್ಗಟ್ಟಿನಿಂದ ದುಡಿಮೆ

Avinash R

ಸುಳ್ಯ: ಕಚೇರಿಯ ಎಲ್ಲ ಸಿಬ್ಬಂದಿ ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕು. ಸಮರ್ಪಕ ಮಾಹಿತಿಯ ಜತೆಗೆ ಜನರಿಗೆ ಉತ್ತಮ ಸೇವೆ ಒದಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ದುಡಿಯೋಣ ಎಂದು ನಪಂ ನ ನೂತನ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಹೇಳಿದರು.

ನಪಂ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಬಳಿಕ ಕಚೇರಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರೊಂದಿಗೆ ನಪಂ ಸಭಾಂ ಗಣದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಮಾತನಾಡಿದರು. ನಮ್ಮಿಂದಾಗಿ ಜನರಿಗೆ ತೊಂದರೆ ಉಂಟಾಗಬಾರದು. ನಾವೆಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡೋಣ. ತೊಂದರೆಯಾಗಿದೆ ಎಂದು ಯಾವುದೇ ದೂರು ಬರದಂತೆ ನೋಡಿಕೊಳ್ಳೋಣ ಎಂದರು. ನಗರ ಶುಚಿಯಾಗಿಡಲು ಶ್ರಮಿಸುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಮಾತನಾಡಿದರು.

ಉಪಾಧ್ಯಕ್ಷ ಬುದ್ಧ ನಾಯ್ಕ ಮಾತನಾಡಿದರು. ಮುಖ್ಯ ಅಧಿಕಾರಿ ಸುಧಾಕರ್, ಸಿಬ್ಬಂದಿ ಪೌರ ಕಾರ್ಮಿಕರು ಭಾಗವಹಿಸಿದ್ದರು.