ರಬ್ಬರ್ ಬೋರ್ಡ್ ನಿರ್ದೇಶಕ ಮುಳಿಯ ಕೇಶವ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಭರತ್‌ರಾಜ್, ಅನಂತ ಭಟ್ ಮಚ್ಚಿಮಲೆ ಮೊದಲಾದವರಿದ್ದರು. 
ಜಿಲ್ಲೆ

ರಬ್ಬರ್ ಬೆಳೆಯುವ ಆಸಕ್ತಿ ಕುಸಿತ : ಮುಳಿಯ ಕೇಶವ ಭಟ್ ಕಳವಳ

ಸೌಮ್ಯ ಆರ್

ಬೆಳ್ತಂಗಡಿ: ಭಾರತ ಹೆಚ್ಚು ರಬ್ಬರ್ ಕೃಷಿ ಮಾಡುವ ದೇಶವಾಗಿದ್ದು, ಇತ್ತೀಚೆಗೆ ಧಾರಣೆ ಕುಸಿತ, ರಬ್ಬರ್ ಟ್ಯಾಪರ್‌ಗಳ ಕೊರತೆಯಿಂದ ಬೆಳೆಗಾರರಿಗೆ ರಬ್ಬರ್ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದು ರಬ್ಬರ್ ಬೋರ್ಡ್ ನಿರ್ದೇಶಕ ಮುಳಿಯ ಕೇಶವ ಭಟ್ ಹೇಳಿದರು.

ಉಜಿರೆಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಯೂನಿಯನ್ ಉದ್ಘಾಟನೆ ಹಾಗೂ ಕಾರ್ಮಿಕರ ಸಮಾವೇಶ ಮತ್ತು ಬಿ ಎಂ.ಎಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಆರೆಸ್ಸೆಸ್ಸ್ ಪ್ರಚಾರ ಪ್ರಮುಖ್ ಭರತ್‌ರಾಜ್ ಮಾತನಾಡಿ, ಬಿ.ಎಂ.ಎಸ್ ಸಂಘಟನೆ ರಾಷ್ಟ್ರದ ಉನ್ನತಿ, ತ್ಯಾಗ, ಮನೋಭಾವದ ಸೇವೆಗೆ ಜತೆಯಾಗಿದೆ ಎಂದರು.

ಉಜಿರೆಯ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘದ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಮಾತನಾಡಿದರು. ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷ ಅನಿಲ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಮಜ್ದೂರ್ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ, ನಿವೃತ್ತ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಕ್ಷಕ ರಾಘವನ್, ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಹರೀಶ್ ಜೆ.ಕೆ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಮಾಚಾರು ಉಪಸ್ಥಿತರಿದ್ದರು.

ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಸ್ವಾಗತಿಸಿದರು. ನಾಗೇಶ್ ಮತ್ತು ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಲೋಲಾಕ್ಷಿ ವಂದಿಸಿದರು.

ವಿವಿಧ ಸೌಲಭ್ಯ ಮಾಹಿತಿ, ಅಭಿಯಾನ

ರಬ್ಬರ್ ಟ್ಯಾಪರ್ ಕಾರ್ಮಿಕರ ವಿವಿಧ ಬೇಡಿಕೆಗಳ ಮನವಿಯನ್ನು ಮುಳಿಯ ಕೇಶವ ಭಟ್ ಅವರಿಗೆ ನೀಡಲಾಯಿತು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಮಾಲೋಚಕಿ ಉಷಾ ನಾಯಕ್, ಸಾಮಾಜಿಕ ಭದ್ರತಾ ಯೋಜನೆಗಳ ಗ್ರಾಮಮಟ್ಟದ ಸಂಪೂರ್ಣ ಅಭಿಯಾನ ನಡೆಸಿಕೊಟ್ಟರು. ಉಜಿರೆ ಕೆನರಾ ಬ್ಯಾಂಕ್ ಮ್ಯಾನೇಜರ್ ಜಯಂತ, ಬ್ಯಾಂಕ್ ಮೂಲಕ ಕಾರ್ಮಿಕರಿಗೆ ಸಿಗುವ ಸಾಲ ಸೌಲಭ್ಯಗಳ ಮಾಹಿತಿ ನೀಡಿದರು. ಮಂಗಳೂರು ರಬ್ಬರ್ ಬೋರ್ಡ್‌ನ ರಬ್ಬರ್ ಬೆಳೆ ಅಭಿವೃದ್ಧಿ ಅಧಿಕಾರಿ ರೋಶಿನಿ, ವಿವಿಧ ಸೌಲಭ್ಯ ಮಾಹಿತಿ ನೀಡಿದರು. ಸಂಘದ ಸದಸ್ಯರಿಗೆ ಗುರುತು ಚೀಟಿ ವಿತರಿಸಲಾಯಿತು. ಭಗವಾಧ್ವಜಕ್ಕೆ ಪುಷ್ಪಾರ್ಚನೆ ನಡೆಯಿತು.