ಕುಷ್ಟಗಿ; ದತ್ತಿ ನಿಧಿ ನೀಡುವ ಮೂಲಕ ಹಿರಿಯರನ್ನು ಸ್ಮರಿಸುವ ಕಾರ್ಯವಾಗಬೇಕಿದೆ ಎಂದು ದಾವಣಗೇರಿಯ ಕೆಬಿಆರ್ ಡ್ರಾಮಾ ಕಂಪನಿಯ ಮಾಲಿಕ ಚಿಂದೋಡಿ ವಿಜಯಕುಮಾರ್ ಹೇಳಿದರು.
ಇದನ್ನೂ ಓದಿ: ದೇಶಕ್ಕೆ ಹೋರಾಡಿದವರ ಸ್ಮರಿಸುವುದು ನಮ್ಮ ಕರ್ತವ್ಯ
ಪಟ್ಟಣದ ಅನ್ನದಾನೇಶ್ವರ ಪಪೂ ಕಾಲೇಜಿನಲ್ಲಿ ಕಸಾಪ ಏರ್ಪಡಿಸಿದ್ದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಹಿರಿಯರ ಸ್ಮರಣೆ ಮಾಡುವುದು ಕಿರಿಯರ ಆದ್ಯಕರ್ತವ್ಯ.
ಸಾಹಿತ್ಯ ಪರಿಷತ್ತಿಗೆ ದತ್ತಿ ನಿಧಿ ನೀಡುವ ದಾನಿಗಳ ಸಂಖ್ಯೆ ಹೆಚ್ಚಬೇಕಿದೆ. ದಿ.ಯಶೋದಮ್ಮ ಮೇಲಗಿರಿಯಪ್ಪ ಸೋನಾರ್ ಹೆಸರಿನಲ್ಲಿ ಪ್ರತಿ ವರ್ಷ ನಡೆಯುತ್ತಿರುವ ದತ್ತಿ ನಿಧಿ ಕಾರ್ಯಕ್ರಮ ಸ್ವಾಗತಾರ್ಹ.
ರಂಗಭೂಮಿಕಲೆ ಕಡೆಗಣನೆಯಾಗುತ್ತಿದೆ. ಯುವಕರು ನಾಟಕಗಳತ್ತ ಆಕರ್ಷಿತರಾಗಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಿದೆ ಎಂದರು.
ಮೇರು ನಟಿ ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಬಿಆರ್‌ಸಿ ಸಂಪನ್ಮೂಲ ವ್ಯಕ್ತಿ ಶರಣಪ್ಪ ತೆಮ್ಮಿನಾಳ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಕಸಾಪ ಮಾಜಿ ಅಧ್ಯಕ್ಷ ಹನುಮೇಶ ಶೆಟ್ಟರ್, ರವೀಂದ್ರ ಬಾಕಳೆ, ನಟರಾಜ ಸೋನಾರ್, ಕಲಾವಿದ ಶೇಷಗಿರಿ ಸೋನಾರ್, ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಶರಣಪ್ಪ ಬಡಿಗೇರ, ಮಾಜಿ ಅಧ್ಯಕ್ಷ ಶ್ರೀಶೈಲ್ ಬಡಿಗೇರ, ಪ್ರಮುಖರಾದ ಶಾಂತರಾಜ ಗೋಗಿ, ಕುಮಾರ್ ಬಡಿಗೇರ, ಈಶಪ್ಪ ಬಡಿಗೇರ ಇತರರಿದ್ದರು.