ಜಿಲ್ಲೆ

ಕ್ವಾರ್ಟರ್ಸ್‌ನಲ್ಲಿ ಮಹಿಳೆ ಕೊಲೆ

ಇಂದಿರಾ ಎನ್ ಕೆ

ಕಾಸರಗೋಡು: ಹೊಸದುರ್ಗದ ಕ್ವಾರ್ಟರ್ಸ್‌ನಲ್ಲಿ ಮಹಿಳೆ ಮೃತದೇಹ ಪತ್ತೆ ಪ್ರಕರಣ ಭೇದಿಸಿರುವ ಪೊಲೀಸರು, ಇದು ಕೊಲೆ ಎಂದು ಪತ್ತೆಹಚ್ಚಿದ್ದಾರೆ. ಮೂಲತಃ ಚೆಂಗಳ ನೆಲ್ಲಿಕಟ್ಟೆ ನಿವಾಸಿ ಫಾತಿಮ(42)ಅವರ ಮೃತದೇಹ ಜುಲೈ 2ರಂದು ಹೊಸದುರ್ಗ ನಾರ್ತ್ ಕೋಟಚ್ಚೇರಿ ರಸ್ತೆಯ ಅವಿಯಿಲ್ ಅಪಾರ್ಟ್‌ಮೆಂಟ್‌ನ ಹೊರಗಿಂದ ಬೀಗ ಹಾಕಲಾಗಿದ್ದ ಕೊಠಡಿಯೊಳಗೆ ಪತ್ತೆಯಾಗಿತ್ತು. ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿದ್ದು, ಮೂರು ದಿವಸಗಳ ಹಿಂದೆ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿತ್ತು. ಮೃತದೇಹ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಂಚದಡಿ ಪತ್ತೆಯಾಗಿತ್ತು.

ಈ ಮಧ್ಯೆ ಜುಲೈ 1ರಂದು ಫಾತಿಮಾಳ ಪ್ರಿಯತಮ ಎನ್ನಲಾದ ಚೆಂಗಳ ರಹಮತ್‌ನಗರ ಕನಿಯಡ್ಕ ನಿವಾಸಿ ಅಸೈನಾರ್(33)ಎಂಬಾತನ ಮೃತದೇಹ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದ ವಸತಿಗೃಹದಲ್ಲಿ ಪತ್ತೆಯಾಗಿದ್ದು, ಎರಡು ದಿವಸಗಳ ಹಿಂದೆ ಫಾತಿಮಾಳ ಜತೆ ಕಾಞಂಗಾಡಿನ ಅದೇ ಕೊಠಡಿಯಲ್ಲಿ ವಾಸಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಫಾತಿಮಾಳ ಕೊಲೆಗೈದ ನಂತರ ಅಸೈನಾರ್ ಕಾಸರಗೋಡಿಗೆ ಆಗಮಿಸಿ ನೇಣಿಗೆ ಶರಣಾಗಿದ್ದನು. ಫಾತಿಮಾಳ ಮೃತದೇಹದ ಶವಮಹಜರು ವರದಿಯಲ್ಲಿ ಕೊಲೆ ಎಂದು ಸಾಬೀತಾಗಿತ್ತು.