ಜಿಲ್ಲೆ

ಚಲಿಸುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ; ನಾಲ್ಕು ಮಂದಿ ಬಂಧನ

ಬೆಂಗಳೂರು: ಪಾರ್ಕಿನಲ್ಲಿ ಕುಳಿತ್ತಿದ್ದ ಯುವತಿಯನ್ನು ಅಪಹರಿಸಿ ಚಲಿಸುವ ಕಾರಿನಲ್ಲಿ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

19 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಸತೀಶ್​, ವಿಜಯ್​, ಶ್ರೀಧರ್​, ಕಿರಣ್​ರನ್ನು ಬಂಧಿಸಿದ್ದು ಆರೋಪಿಗಳ ವಯಸ್ಸು 22ರಿಂದ 26 ವರ್ಷ ಇರಬಹುದು ಎಂದು ಅಂದಾಜಿಸಿದ್ದಾರೆ.

ಘಟನೆ ಮಾರ್ಚ್​ 25ರಂದು ನಡೆದಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಗರುವಾರ ರಾತ್ರಿ ಕೋರಮಂಗಲದ ನ್ಯಾಷನಲ್​ ಗೇಮ್ಸ್​ ವಿಲೇಜ್​(NGF) ಪಾರ್ಕಿನಲ್ಲಿ ತನ್ನ ಸ್ನೇಹಿತನೊಂದಿಗೆ ಕುಳಿತಿದ್ದ ಸಮಯದಲ್ಲಿ ಆರೋಪಿಗಳು ಸಂತ್ರಸ್ತ ಯುವತಿ ಹಾಗೂ ಆಕೆಯ ಸ್ನೇಹಿತನೊಂದಿಗೆ ಜಗಳ ಮಾಡಿದ್ದಾರೆ.

ನಂತರ ಯುವತಿಯ ಸ್ನೇಹಿತ ಹೊರಟು ಹೋಗಿದ್ದು ಸಂತ್ರಸ್ತೆ ಏಕಾಂಗಿಯಾಗಿ ಇರುವುದನ್ನು ಗಮನಿಸಿದ ಆರೋಪಿಗಳು ಪುನಃ ಜಗಳ ಮಾಡಿದ್ದಾರೆ. ಇದೇ ವೇಳೆ ಆರೋಪಿಗಳು ತನ್ನ ಸ್ನೇಹಿತನ ಕಾರಿನಲ್ಲಿ ಯುವತಿಯನ್ನು ಅಪಹರಿಸಿ ಹೊಸೂರು ರಸ್ತೆ, ನೈಸ್​ ರಸ್ತೆಗೆ ಕರೆದುಕೊಂಡು ಹೋಗಿ ಚಲಿಸುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.

ಬೆಳಗಿನ ಜಾವ 3:30ರ ಸುಮಾರಿಗೆ ಆರೋಪಿಗಳು ಸಂತ್ರಸ್ತ ಯುವತಿಯನ್ನು ಈಜಿಪುರ ಮೇಲ್ಸೇತುವೆ ಬಳಿ ಬಿಟ್ಟು ಹೋಗಿದ್ಧಾರೆ. ಸಂತ್ರಸ್ತ ಯುವತಿಯೂ ತನ್ನ ತಾಯಿ ಹಾಗೂ ಸ್ನೇಹಿತರ ಸಹಾಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ದೂರು ದಾಖಲಾದ 9 ಘಂಟೆಗಳಲ್ಲಿ ಅಪರಾಧಿಗಳನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ಧಾರೆ.