More

    ಹಿಜಾಬ್​ ತೆಗೆಯುವಂತೆ ಒತ್ತಾಯ; ಏಳು ಮಂದಿ ಬಂಧನ

    ವೆಲ್ಲೂರು: ಮಹಿಳೆಯೊಬ್ಬರಿಗೆ ಒತ್ತಾಯಪೂರ್ವಕವಾಗಿ ಹಿಜಾಬ್​ ತೆಗೆಯುವಂತೆ ಹೇಳಿದ ಅಪ್ರಾಪ್ತ ವಯಸ್ಸಿನ ಹುಡುಗ ಸೇರಿದಂತೆ ಏಳು ಮಂದಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್​​ 27ರಂದು ತಮಿಳುನಾಡಿನ ಐತಿಹಾಸಿಕ ವೆಲ್ಲೂರು ಕೋಟೆಗೆ ಮಹಿಳೆ ಭೇಟಿ ನೀಡಿದ್ದ ಸಮಯದಲ್ಲಿ ನಡೆದಿದ್ದ ಘಟನೆಯ ವಿಡಿಯೋವನ್ನ ಆರೋಪಿಗಳು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದರು ಎಂದು ತಿಳಿದು ಬಂದಿದೆ.

    ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಬಂಧಿತ ಆರೋಪಿಗಳನ್ನು ಇಬ್ರಾಹಿಂ ಭಾಷಾ(24), ಮೊಹಮ್ಮದ್​ ಫೈಜಲ್​(23), ಸಂತೋಷ್​(23), ಇಮ್ರಾನ್​ ಭಾಷಾ(22), ಅಶ್ರಫ್​ ಭಾಷಾ(20), ಪ್ರಶಾಂತ್​(20) ಮತ್ತು ಅಪ್ರಾಪ್ತ ವಯಸ್ಸಿನ ಹುಡುಗನನ್ನು ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಿಜಾಬ್​ ತೆಗೆಯುವಂತೆ ಒತ್ತಾಯ; ಏಳು ಮಂದಿ ಬಂಧನ

    ಇದನ್ನೂ ಓದಿ: ಸರಳ ಪೊಲೀಸ್ ಧ್ವಜ ದಿನಾಚರಣೆ; ಪ್ರಶಸ್ತಿ ಪುರಸ್ಕೃತರಿಗಿಲ್ಲ ಸನ್ಮಾನ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ವೆಲ್ಲೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಸ್​.ರಾಜೇಶ್​ ಖನ್ನಾ ಬಂಧಿತ ಆರೋಪಿಗಳನ್ನು ಆಟೋ ರಿಕ್ಷಾ ಚಾಲಕರು ಎಂದು ಊಹಿಸಲಾಗಿದೆ. ವೆಲ್ಲೂರು ಕೋಟೆಗೆ ಭೇಟಿ ನೀಡಿದ್ದ ಇನ್ನು ಮೂವರು ಮಹಿಳೆಯರಿಗೆ ಆರೋಪಿಗಳು ಹಿಜಾಬ್​ ತೆಗೆಯುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ತಿನಖೆ ಬಳಿಕ ಕಾರಣ ತಿಳಿಯಲಿದೆ ಅಲ್ಲಿಯವರೆಗೂ ಸಾರ್ವಕಜನಿಕರು ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಳ್ಳಬಾರದು ಎಂದು ವಿನಂತಿಸಿಕೊಂಡಿದ್ದಾರೆ.

    ಹಿಜಾಬ್​ ಘಟನೆಯ ನಂತರ ವೆಲ್ಲೂರು ಕೋಟೆಯ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಶಾಶ್ವತವಾಗಿ ಪೊಲೀಸ್​ ಬೂತ್​ ಒಂದನ್ನು ತೆರೆಯುತ್ತೇವೆ. ಸಾರ್ವಜನಿಕರ ಉಪಯೋಗಕ್ಕೆ ಪೊಲೀಸ್​ ಅಧಿಕಾರಿಗಳ ನಂಬರ್​ಗಳನ್ನು ಇಲ್ಲಿ ಹಾಕಲಾಗುವುದು ಎಂದು ವೆಲ್ಲೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಸ್​.ರಾಜೇಶ್​ ಖನ್ನಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts