More

    ಅಲೆಮಾರಿ ಜನರನ್ನು ಸಿನಿಮಾ ನೋಡಲು ಒಳಗೆ ಬಿಡದ ಮಲ್ಟಿಪ್ಲೆಕ್ಸ್​​​ ಸಿಬ್ಬಂದಿ!

    ಚೆನೈ: ತಮಿಳಿನ ಸ್ಟಾರ್​ ನಟ ಸಿಂಬರಸನ್​ ನಟನೆಯ ಪತ್ತು ತಲಾ ಚಿತ್ರ ವೀಕ್ಷಿಸಲು ಮಲ್ಟಿಫ್ಲೆಕ್ಸ್​ಗೆ ಹೋಗಿದ್ದ ನಾರಿಕರುವ ಸಮುದಾಯದ ಅಲೆಮಾರಿ ಜನರನ್ನು ಸಿಬ್ಬಂದಿ ಸಿನಿಮಾ ವೀಕ್ಷಿಸಲು ಥಿಯೇಟರ್​ ಒಳಗೆ ಬಿಡದಿರುವುದು ತಮಿಳುನಾಡಿನಲ್ಲಿ ಹೊಸ ವಿವಾದವನ್ನ ಹುಟ್ಟುಹಾಕಿದೆ.

    ಚೆನೈನ ಕೋಯೆಂಬಾಡು ಪ್ರದೇಶದಲ್ಲಿರುವ ರೋಹಿಣಿ ಸಿಲ್ವರ್​ ಸ್ಕ್ರೀನ್ಸ್​ ಮಲ್ಟಿಫ್ಲೆಕ್ಸ್​ನಲ್ಲಿ ಘಟನೆ ನಡೆದಿದೆ. ನಾರಿಕರುವ ಸಮುದಾಯದ ಮಹಿಳೆ ಹಾಘೂ ಮಕ್ಕಳು ಟಿಕೆಟ್​ ಖರೀದಿಸಿ ಚಿತ್ರವನ್ನ ವೀಕ್ಷಿಸಲು ಬಂದಿದ್ದರು. ಆದರೆ, ಟಿಕೆಟ್​ ತಪಾಸಣೆ ವೇಳೆ ಸಿಬ್ಬಂದಿ ಇವರುಗಳನ್ನು ತಡೆದಿದ್ದು ಚಿತ್ರಮಂದಿರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿಲ್ಲ.

    ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ಚಿತ್ರಮಂದಿರದ ಆಡಳಿತ ಮಂಡಳಿ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಸಿಕ್ಕ ಅವಕಾಶಗಳನ್ನು ಸಂಭ್ರಮಿಸಿ; ಕಮಲ್ ಹಾಸನ್ ಕರೆ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ರೋಹಿಣಿ ಸಿಲ್ವರ್​ ಸ್ಕ್ರೀನ್ಸ್​ ಸಂಸ್ಥೆ ಪತ್ತು ತಲಾ ಚಿತ್ರವು U/A ಪ್ರಮಾಣಪತ್ರ ಇರುವ ಸಿನಿಮಾ. ಚಿತ್ರವನ್ನು ವೀಕ್ಷಿಸಲು 12 ವರ್ಷಕ್ಕಿಂತ ವಯಸ್ಸಿನ ಕೆಳಗಿರುವವರನ್ನು ಚೆಕ್ಕಿಂಗ್​ ಕೌಂಟರ್​ ಬಳಿ ಅವರೆಲ್ಲರನ್ನು ತಡೆಯಲಾಗಿತ್ತು. ಆದರೆ, ನಂತರ ಅವರಿಗೆ ಚಿತ್ರವನ್ನು ವೀಕ್ಷಿಸಲು ಅವಕಾಶವನ್ನು ನೀಡಲಾಯಿತ್ತು ಎಂದು ಸಂಸ್ಥೆಯೂ ಸಮಜಾಯಿಷಿ ನೀಡಿದೆ.

    ರೋಹಿಣಿ ಸಿಲ್ವರ್​ ಸ್ಕ್ರೀನ್ಸ್​ ಸಂಸ್ಥೆಯ ನಡೆಗೆ ಅನೇಕರು ಆಕ್ಷೇಪಿಸಿದ್ದು ಅನುಮತಿ ಇಲ್ಲದೆ ವಿಡಿಯೋವನ್ನು ತೆಗೆದು ಪ್ರಕಟಿಸಿದ್ದು ತಪ್ಪು. ಇದು ಅಮಾಯಕರನ್ನು ಗೇಲಿ ಮಾಡುವಂತಿದೆ ಸರ್ಕಾರ ರೋಹಿಣಿ ಸಂಸ್ಥೆಯ ವಿರುದ್ದ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts