ಬದಿಯಡ್ಕ: ಉಪ್ಪಳ ಬಳಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರೋಡ್‌ಗಳಲ್ಲಿ ಹಲವೆಡೆ ರಕ್ಷಣಾ ವಿಧಾನ ಅನುಸರಿದೇ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಕೇಬಲ್‌ಗಳು ನೆಲಕ್ಕೆ ತಾಗುವಷ್ಟು ಬಾಗಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯವಾಗಿದೆ.
ನಯಾಬಜಾರ್‌ನಲ್ಲಿ ಹಾಗೂ ಸೀತಾಂಗೋಳಿ-ಬದಿಯಡ್ಕ ರಸ್ತೆಯ ನೀರ್ಚಾಲು ಪೇಟೆಯಲ್ಲಿ ಅಪಾಯಕಾರಿಯಾಗಿ ವಿದ್ಯುತ್ ತಂತಿಗಳು ನೇತಾಡುತ್ತಿದ್ದು, ಹಲವೆಡೆ ಫ್ಯೂಸ್‌ಗಳು ಹಾಗೂ ಸ್ವಿಚ್‌ಗಳು ಕೂಡ ನೆಲಕ್ಕೆ ಮುಖಮಾಡಿವೆ. ಸಾರ್ವಜನಿಕರು ಈ ಸಮಸ್ಯೆಗಳ ಕುರಿತು ವಿದ್ಯುತ್ ಇಲಾಖೆಯ ಅಧಿಕಾರಿಗಳ ಗಮಕ್ಕೆ ತಂದಿದ್ದು, ಅಧಿಕಾರಿಗಳು ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.