

ಬಂಟ್ವಾಳ: ತುಳುನಾಡಿನ ಜನಜೀವನ ಕೃಷಿ ಪದ್ಧತಿಯೊಂದಿಗೆ ಬೆರೆತುಕೊಂಡಿದ್ದು, ಆಹಾರ ಪದ್ಧತಿ ಮತ್ತು ಸಂಪ್ರದಾಯ ಅರ್ಥಪೂರ್ಣವಾಗಿದೆ ಎಂದು ಜ್ಯೋತಿಷಿ ಪ್ರಕಾಶ್ ಕುಮಾರ್ ಪುತ್ರೋಟಿಬೈಲು ಹೇಳಿದ್ದಾರೆ.
ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ ವತಿಯಿಂದ ಪಾಣೆಮಂಗಳೂರಿನಲ್ಲಿ ಭಾನುವಾರ ‘ಆಟಿದ ತಮ್ಮನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೃಷಿಕರಾದ ಯಶೋದಾ ಸಂಜೀವ ಸಫಲ್ಯ ಕೇದಗೆ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್. ಮಾವೆ, ವಿಟ್ಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್ ವಿಟ್ಲ, ನೋಟರಿ ವಕೀಲ ರವಿ ಕುಮಾರ್, ಉದ್ಯಮಿ ಜನಾರ್ದನ ಅರ್ಕುಳ, ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕಿ ವಿದ್ಯಾ ಗಾಣಿಗ, ಉದ್ಯಮಿ ಪುಷ್ಪಾ ಮನೋಜ್, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಪ್ರಮುಖರಾದ ನರ್ಸಪ್ಪ ಅಮೀನ್, ಸಚಿನ್ ಮೆಲ್ಕಾರ್, ಬಾಲಕೃಷ್ಣ ಮಾಸ್ಟರ್, ವೇದವ ಗಾಣಿಗ, ನಾಗೇಶ್ ಎಂ., ಭುವನೇಶ್ ಮೊಗರ್ನಾಡು, ಲಿಂಗಪ್ಪ ಕರ್ಕೇರ, ಶರತ್ಕುಮಾರ್, ಚರಣ್ ಮೆಲ್ಕಾರ್, ಲತಾ ಮೆಲ್ಕಾರ್ ಮತ್ತಿತರರು ಇದ್ದರು. ವಿಶ್ವ ಗಾಣಿಗರ ಚಾವಡಿ ವತಿಯಿಂದ ನಡೆಯಲಿರುವ ರಕ್ತದಾನ ಮತ್ತು ಉಚಿತ ವೈದ್ಯಕೀಯ ತಪಾಸಣೆ ಆಮಂತ್ರಣ ಬಿಡುಗಡೆಗೊಂಡಿತು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿದರು. ವಸಂತ ಪಿ. ವಂದಿಸಿದರು. ಸಹನಾ ಇಡ್ಕಿದು, ಅನುಷಾ ಕಲ್ಲಡ್ಕ, ಜಯಶ್ರೀ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.