ಜಿಲ್ಲೆ

ಮಜಲುವಿನಲ್ಲಿ ಒಂಟಿ ಸಲಗ

Avinash R

ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಬಟ್ಲಡ್ಕ , ಬೀಬಿ ಮಜಲು ಪರಿಸರದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಬೀಬಿ ಮಜಲು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ಬಟ್ಲಡ್ಕ ಪರಿಸರದಲ್ಲಿ ಹಲವು ತೋಟಗಳಿಗೆ ನುಗ್ಗಿದ್ದ ಈ ಒಂಟಿ ಸಲಗ ತೋಟದ ಬಾಳೆ ಕೃಷಿಯನ್ನು ಹಾನಿಗೀಡು ಮಾಡಿದೆ. ಕಾಡಾನೆಯನ್ನು ಕಾಡಿನ ಪರಿಧಿಯಲ್ಲೇ ಸಂಚರಿಸುವಂತೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆಯ ಮೇಲೆ ಕಣ್ಗಾವಲು ಇರಿಸಿದ್ದಾರೆ.