ಸುಳ್ಯ: ಆಲೆಟ್ಟಿ ಮುಖ್ಯರಸ್ತೆಯ ನಾಗಪಟ್ಟಣ ವಿಶ್ರಾಂತಿ ಗೃಹದ ಸಮೀಪ ಆನೆಗಳ ಹಿಂಡೊಂದು ಶನಿವಾರ ರಾತ್ರಿ ವೇಳೆ ಪ್ರತ್ಯಕ್ಷಗೊಂಡು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಟಾರ್ಚ್ ಬೆಳಕಿನಲ್ಲಿ ಮಾಡಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗಪಟ್ಟಣದ ಬಳಿ ಇರುವ ಅರಣ್ಯ ಇಲಾಖೆಯ ರಬ್ಬರ್ ತೋಟದಲ್ಲಿ ಈ ಆನೆಗಳ ಹಿಂಡು ಕಂಡುಬಂದಿದ್ದು ಸನಿಹದಲ್ಲೇ ಇದ್ದ ಮನೆಯವರು ಆತಂಕದಿಂದಲೇ ರಾತ್ರಿ ಕಳೆದಿದ್ದಾರೆ.