ಕೂಡ್ಲಿಗಿ ತಾಲೂಕಿನ ಜಂಗಮಸೋವೆನಹಳ್ಳಿಯಲ್ಲಿ ಕಾಡುಹಂದಿಗಳ ದಾಳಿಯಿಂದ ರೈತ ಶೆಟ್ರು ಶಂಕ್ರಿ ವೀರಪ್ಪನ ಹೊಲದ ಮೆಕ್ಕೆಜೋಳ ಬೆಳೆ ನಾಶವಾಗಿರುವುದು. 
ಜಿಲ್ಲೆ

ಕಾಡುಹಂದಿಗಳ ದಾಳಿಯಿಂದ ಮೆಕ್ಕೆಜೋಳ ನಾಶ

ಕೂಡ್ಲಿಗಿ: ತಾಲೂಕಿನ ಜಂಗಮ ಸೋವೇನಹಳ್ಳಿಯಲ್ಲಿ ಮೆಕ್ಕೆಜೋಳ ಬೆಳೆಯನ್ನು ಕಾಡುಹಂದಿಗಳು ನಾಶ ಮಾಡಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.

ಕಾಳುಕಟ್ಟುವ ಹಂತದಲ್ಲಿ ಮೆಕ್ಕೆಜೋಳ ಬೆಳೆ ಹಾಳು

ರೈತರಾದ ಶಟ್ರು ಶಂಕ್ರಿ ವೀರಪ್ಪ , ನಂದಿ ದೇವೇಂದ್ರಪ್ಪ, ಗಂಧೋಡಿ ಕೊಟ್ರಪ್ಪ, ಬಂಡ್ರಿ ಚಿನ್ನಪ್ಪ, ವಡೇರಹಳ್ಳಿ ಅಜ್ಜಪ್ಪ, ಕೆರೆನಹಳ್ಳಿ ಗಣೇಶ ಅವರ ಹತ್ತಾರು ಎಕರೆ ಮೆಕ್ಕೆಜೋಳ ಬೆಳೆ ಕಾಡುಹಂದಿಗಳ ದಾಳಿಯಿಂದ ಹಾಳಾಗಿದೆ. ಕಾಳು ಕಟ್ಟುವ ಹಂತದಲ್ಲಿ ಮೆಕ್ಕೆಜೋಳ ಬೆಳೆಯನ್ನು ಕಾಡುಹಂದಿಗಳು ನಾಶ ಮಾಡುತ್ತಿರುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಮೆಕ್ಕೆಜೋಳ ಬೆಳೆ ಉತ್ತಮವಾಗಿ ಬಂದಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ಮಾಣವಾಗಿದೆ.

ಪದೇ ಪದೆ ಕಾಡುಹಂದಿಗಳು ಹಾಗೂ ಕರಡಿಗಳ ದಾಳಿಯಿಂದ ಮೆಕ್ಕೆಜೋಳ, ಶೇಂಗಾ ಬೆಳೆಗಳು ನಾಶವಾಗುತ್ತಿರುವುದು ರೈತರ ಬದುಕು ದುಸ್ತರವಾಗಿದೆ. ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಸರ್ಕಾರದ ಮಟ್ಟದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಬೆಳೆನಾಶಕ್ಕೆ ಪರಿಹಾರ ಒದಗಿಸಬೇಕು ಎಂಬುದು ರೈತರು ಒತ್ತಾಯಿಸಿದರು.