ಜಿಲ್ಲೆ

ಕಾಡುಪ್ರಾಣಿ ದಾಳಿಯಿಂದ 10 ಕುರಿಮರಿಗಳ ಸಾವು

Kopala - Desk - Eraveni

ಕೊಟ್ಟೂರು: ಮೂರ್ತಿನಾಯಕನಹಳ್ಳಿ ಸಮೀಪ ಮಂಗಳವಾರ ಕುರಿಹಟ್ಟಿ ಮೇಲೆ ದಾಳಿ ಮಾಡಿರುವ ಕಾಡುಪ್ರಾಣಿ 10 ಮರಿಗಳನ್ನು ಕೊಂದು ಹಾಕಿದೆ.

ರಾಂಪುರ ಗ್ರಾಮದ ಕುರಿಗಾಹಿ ಕಂಕ್ರಿ ಬಸವರಾಜ್ ಅವರ ಕುರಿಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಉಜ್ಜಿನಿ ಪಶುವೈದ್ಯ ಅಭಿಷೇಕ ಮತ್ತು ಅರಣ್ಯ ಇಲಾಖೆಯ ತಿರುಮಲೇಶ ಭೇಟಿ ನೀಡಿ ಪರಿಶೀಲಿಸಿದರು.