ಈ.ತುಕಾರಾಮ್ 
ಜಿಲ್ಲೆ

ಆರೋಪ ಬಂದಾಗ ತನಿಖೆ ಸಹಜ

ಹೊಸಪೇಟೆ: ಆರೋಪಗಳು ಬಂದಾಗ ತನಿಖೆ ನಡೆಸುವುದು ಸಹಜ. ಯಾವುದೇ ತನಿಖೆಯಾದರೂ ಎದುರಿಸುವೇ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಮನೆಯನ್ನು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಗೌರಯುತವಾಗಿ ಉತ್ತರಿಸಿದ್ದೇನೆ. ಅವರ ಕೆಲಸ ಅವರು ಮಾಡಿದ್ದಾರೆ. ತಪ್ಪು ಮಾಡಿಲ್ಲ ಎಂದರೆ ಹೆದರುವ ಅವಶ್ಯಕತೆಯಿಲ್ಲ. ನಾನು ನಾಲ್ಕು ಬಾರಿ ಶಾಸಕ, ಈಗ ಸಂಸದನಾಗಿದ್ದೇನೆ. ಸರಿಯಾಗಿ ಆಡಳಿತ ನಡೆಸಿ ಜನರ ನಂಬಿಕೆ ಗಳಿಸಿದ್ದೇನೆ. ಜನರು ನಮ್ಮನ್ನು ಗೆಲ್ಲಿಸುತ್ತಾರೆ. ಸಂತೋಷ್ ಲಾಡ್ ಸೇರಿ ಹಿರಿಯ ನಾಯಕರು, ಜನರ ಆಶೀರ್ವಾದ ಇದೆ. ಅಹಮದಾಬಾದ್‌ನಲ್ಲಿ ವಿಮಾನ ದುರಂತ ಪ್ರಕರಣದ ಬಗ್ಗೆ ಗೊತ್ತಿಲ್ಲದೇ ಮಾತಾಡೋದು ತಪ್ಪು. ಈಗ ಬ್ಲಾಕ್‌ಬಾಕ್ಸ್ ಸಿಕ್ಕಿದೆ, ಎಲ್ಲವೂ ತನಿಖೆ ಬಳಿಕ ತಿಳಿಯಲಿದೆ ಎಂದರು.