ಕೊಟ್ಟೂರು: ಮಳೆ ನೀರನ್ನು ವೈಜ್ಞಾನಿಕವಾಗಿ ರಕ್ಷಣೆ ಮತ್ತು ಸಂಗ್ರಹ ಮಾಡಲು ರೈತರು ಮುಂದಾಗಬೇಕು ಎಂದು ಅಂತರ್ಜಲ ತಜ್ಞ ಡಾ. ದೇವರಾಜ್ ರೆಡ್ಡಿ ಹೇಳಿದರು.
ಇದನ್ನೂ ಓದಿ: ಜಲ ಬತ್ತಿ ಭಣಗುಡುತ್ತಿವೆ ಕೆರೆಗಳು
ತಾಲೂಕಿನ ತಿಮ್ಮಲಾಪುರದಲ್ಲಿ ಶುಕ್ರವಾರ ಇಕ್ರ ಸಂಸ್ಥೆ ಹಾಗೂ ಬೆಂಗಳೂರು ಭೂಮಿಮಿತ್ರ ಸಾವಯವ ರೈತರ ಒಕ್ಕೂಟ ಜಂಟೆಯಾಗಿ ಆಯೋಜಿಸಿದ್ದ ಬಿ.ಚಂದ್ರಪ್ಪನ ಕೊಳವೆ ಬಾವಿ ಜಲ ಮರುಪೂರ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಳವೆ ಬಾವಿಯಲ್ಲಿ ಅಂತರ್ಜಲ ಕಮ್ಮಿ ಆಗುತ್ತಿದ್ದಂತೆಯೇ ಮತ್ತೊಂದು ಕೊಳವೆಬಾವಿ ಕೊರೆಸುವುದರ ಬದಲಾಗಿ ಅದೇ ಕೊಳವೆಬಾವಿಗೆ ವೈಜ್ಞಾನಿಕವಾಗಿ ಜಲ ಮರುಪೂರ್ಣ ಮಾಡಿಸಬೇಕೆಂದರು.
ಹೇಗೆ ಜಲ ಮರುಪೂರ್ಣ ಮಾಡಿದ ಕೊಳೆವೆಬಾವಿ, ಮಳೆ ಬಂದಾಗ ನೀರನ್ನು ಬಸಿದುಕೊಂಡು ಅಂತರ್ಜಲ ವೃದ್ದಿಯಾಗಿ ಮೊದಲಿನಂತೆ ಕೊಳವೆ ಬಾವಿಯಲ್ಲಿ ನೀರು ಬರುತ್ತದೆ ಎಂದು ಪ್ರಯೋಗದ ಮೂಲಕ ತಿಳಿಸಿದರು. ಮುಂದಿನ ದಿನಗಳಲ್ಲಿ ಮಳೆ ಕ್ಷೀಣಿಸುವ ಸಂಭವವಿದ್ದು. ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಳವೆಬಾವಿ ಜಲ ಮರುಪೂರ್ಣಕ್ಕೆ ರೈತರಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಇಕ್ರ ಸಂಸ್ಥೆ ಮುಖ್ಯಸ್ಥೆ ವಿ.ಗಾಯಿತ್ರಿ, ಬೆಂಗಳೂರು ಸಾವಯವ ರೈತರ ಒಕ್ಕೂಟದ ಕೊಟ್ಟೂರು ಘಟಕದ ಅದ್ಯಕ್ಷೆ ಎ.ಕೊಟ್ರಬಸಪ್ಪ, ಪ್ರಮುಖರಾದ ದೂಪದಹಳ್ಳಿ ಮಲ್ಲಿಕಾರ್ಜುನ, ಇಕ್ರ ಸಂಸ್ಥೆ ಮಂಜುನಾಥ, ಚಪ್ಪರದಹಳ್ಳಿ ಕೊಟ್ರಪ್ಪ, ಹರೀಶ ತಿಮ್ಮಲಾಪುರ, ಕೋಗಳಿ ಕೊಟ್ರೇಶ, ಬಿ.ಉಮೇಶ, ಸಿ.ಗೀತಮ್ಮ, ಶಿಲ್ಪಾ, ಚಂದ್ರಮ್ಮ ಮುಂತಾದವರಿದ್ದರು.