ಜಿಲ್ಲೆ

ಎಸೆದವರಿಂದಲೇ ತ್ಯಾಜ್ಯ ಸ್ವಚ್ಛಗೊಳಿಸಿದರು

Avinash R

ಸುಳ್ಯ: ಐವರ್ನಾಡು ಗ್ರಾಮದ ಬೇಂಗಮಲೆಯಲ್ಲಿ ಕಸ ಎಸೆದವರಿಗೆ ಪಂಚಾಯಿತಿಯಿಂದ ದಂಡ ವಿಧಿಸಿದ ಘಟನೆ ನಡೆದಿದ್ದು ಕಸ ಎಸೆದವರಿಂದಲೇ ತ್ಯಾಜ್ಯ ವಿಲೇವಾರಿಗೊಳಿಸಲಾಗಿದೆ.

ಐವರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯ ನಿವಾಸಿ ಲಿಂಗಣ್ಣ ಎಂಬುವರಿಗೆ ಪಂಚಾಯಿತಿ 6000 ರೂ. ದಂಡ ವಿಧಿಸಿದೆ. ಅ.19ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ.ಆರ್. ತ್ಯಾಜ್ಯ ಎಸೆದ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡರು.