ಉಜ್ಜಿನಿ ಹೊರವಲಯದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸ್ಥಳಕ್ಕೆ ಗ್ರಾಪಂ ಸದಸ್ಯರಾದ ಗೊಂಗಡಿ ಮಂಜುನಾಥ, ಪರಶಪ್ಪ, ಹೊಸೂರಪ್ಪರ ಲೋಕಪ್ಪ, ಕೆ.ಸಿದ್ದಪ್ಪ, ವೈ.ಸಿದ್ದೇಶ ಇತರರು ಭೇಟಿ ನೀಡಿದ್ದರು. 
ಜಿಲ್ಲೆ

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಸಲ್ಲ

Kopala - Desk - Eraveni

ಕೊಟ್ಟೂರು: ತಾಲೂಕಿನ ಉಜ್ಜಿನಿ ಗ್ರಾಮದ ಹೊರವಲಯದಲ್ಲಿ 1.5 ಕೋಟಿ ರೂ.ವೆಚ್ಚದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ನಿರ್ಮಿಸುತ್ತಿರುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕವನ್ನು ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ವಿರೋಧಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಉಜ್ಜಿನಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಸ್ಥಾಪನೆ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು. ಘಟಕ ನಿರ್ಮಾಣ ಪ್ರದೇಶದಲ್ಲಿ ಈಗಾಗಲೇ ಉಜ್ಜಿನಿ ಗ್ರಾಪಂ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕವಿದೆ. ಶ್ರೀ ಮೂಗಣ್ಣ ಸ್ವಾಮಿ ಧಾರ್ಮಿಕ ಸ್ಥಳವಿದ್ದು, ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.

ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ತಾಲೂಕಿಗೆ ಸಂಬಂಧಿಸಿದ ಹೊಸ ಘಟಕದ ನಿರ್ಮಾಣದಿಂದ ಘನತ್ಯಾಜ್ಯ ವಸ್ತುಗಳೆಲ್ಲ ಈ ಘಟಕಕ್ಕೆ ರವಾನೆಯಾಗಲಿವೆ. ಎರಡು ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಗಳಿಂದ ಈ ಪ್ರದೇಶ ಕಲುಷಿತವಾಗಿತ್ತದೆ. ಜಾತ್ರೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಇಲ್ಲಿ ಹೊಸ ಘಟಕ ನಿರ್ಮಾಣ ಬೇಡವೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್, ಕೂಡ್ಲಿಗಿಸಂತೋಷ ನಾಯ್ಕತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರಲ್ಲಿ ತಪ್ಪು ಕಲ್ಪನೆಗಳಿವೆ. ಘಟಕ ನಿರ್ಮಾಣದಿಂದ ಈ ಪ್ರದೇಶ ಕಲುಷಿತಗೊಳ್ಳುವುದಿಲ್ಲ. ಗ್ರಾಪಂ ಕೆಲ ತಿಂಗಳ ಹಿಂದೆ ಚೆಕ್‌ಬಂದಿ ನೀಡಿದ್ದರಿಂದ ಇಲಾಖೆ ಘಟಕ ನಿರ್ಮಿಸಲಾಗುತ್ತಿದೆ.