ಸಿಂಧನೂರು ತಹಸಿಲ್ ಕಚೇರಿ ಎದುರು ಆರ್.ಎಚ್ ನಂ.1 ಬರ್ಮಾಕ್ಯಾಂಪ್ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಗ್ರಾಪಂ ಅಧ್ಯಕ್ಷ ರೆಹಮತ್ ಪಾಷಾ, ಸದಸ್ಯ ಸಿರಿಲ್, ನಿವಾಸಿಗಳಾದ ಲಕ್ಷ್ಮೀ, ಕನ್ನಮ್ಮ, ಸರೋಜಮ್ಮ ಇದ್ದರು. 
ಜಿಲ್ಲೆ

ಪಡಿತರ ಪಡೆಯಲು ತಪ್ಪದ ಅಲೆದಾಟ

Gangavati - Desk - Veeresh S Ullagaddi

ಸಿಂಧನೂರು: ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ ಎಂದು ತಹಸಿಲ್ ಕಚೇರಿ ಎದುರು ತಾಲೂಕಿನ ಆರ್.ಎಚ್ ನಂ.1 ಬರ್ಮಾ ಕ್ಯಾಂಪ್ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.


ಕಳೆದ ಮೂರು ತಿಂಗಳಿಂದ ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಿಸದೆ ಚೀಟಿ ಮಾತ್ರ ಕೊಡುತ್ತಿದ್ದಾರೆ. ಪಡಿತರ ಕೇಳಿದರೆ ಇವತ್ತು, ನಾಳೆ ಎಂದು ಅಲೆದಾಡಿಸುತ್ತಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿಲ್ಲ. ತಹಸೀಲ್ದಾರ್ ಖುದ್ದು ಗಮನಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ನಿವಾಸಿಗಳು ಒತ್ತಾಯಿಸಿದರು.