ಜಿಲ್ಲೆ

ಸ್ತನ ಕ್ಯಾನ್ಸರ್ ಜಾಗೃತಿಗಾಗಿ ವಾಕಾಥಾನ್; ಸಾವಿರಾರು ಜನ ಭಾಗಿ

ಬೆಂಗಳೂರು: ಸ್ತನ ಕ್ಯಾನ್ಸರ್ ನಿವಾರಣೆ ಹಾಗೂ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ವಾಕಾಥಾನ್ (ಪಾದಯಾತ್ರೆ)ನಲ್ಲಿ ಸುಮಾರು 2ಸಾವಿರ ವೈದ್ಯರು ಪಾಲ್ಗೊಂಡಿದ್ದರು.

ಭಾನುವಾರ ಮುಂಜಾನೆ ಲಾಲ್‌ಬಾಗ್‌ನಿಂದ ಆರಂಭವಾದ ಪಾದಯಾತ್ರೆಯಲ್ಲಿ ವೈದ್ಯರ ಜೊತೆಗೆ ನೂರಾರು ವಿದ್ಯಾರ್ಥಿಗಳು, ನರ್ಸ್‌ಗಳು ಹಾಗೂ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಪಾದಯಾತ್ರೆಯು ಲಾಲ್‌ಬಾಗ್ ಪಶ್ಚಿಮ ದ್ವಾರದಿಂದ ಪ್ರಾರಂಭವಾಗಿ, ಕೃಷ್ಣರಾವ್ ಪಾರ್ಕ್,ಬಿಪಿ ವಾಡಿಯ ರಸ್ತೆ, ಗಾಂಧಿಬಜಾರ್,ಬುಲ್ ಟೆಂಪಲ್ ರಸ್ತೆ ಮಾರ್ಗವಾಗಿ ಶಂಕರಪುರ ಮುಖ್ಯ ರಸ್ತೆಯ ಮುಖಾಂತರ ಸುಮಾರು 3 ಕಿ.ಮೀ. ಕ್ರಮಿಸಿ ಅಂತಿಮವಾಗಿ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯನ್ನು ತಲುಪಿತು. ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರು ಸ್ತನ ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ ಮತ್ತು ಜಾಗೃತಿ ಮೂಡಿಸಿದರು.